ಎಸ್ ಬಿ ಐ ನಿಂದ 407 ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿ ಆಹ್ವಾನ

02 Feb 2018 2:32 PM | General
259 Report

ನವದೆಹಲಿ : ದೇಶದ ಅತ್ಯಂತ ದೊಡ್ಡ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನೇಮಕಾತಿ ಪ್ರಕಟಣೆ ಹೊರಡಿಸಿದೆ, ಒಟ್ಟು 407 ಸ್ಪೆಷಲಿಸ್ಟ್ ಕೇಡರ್ ಆಫೀಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನ ಮಾಡಿದೆ. ಇಂದಿನಿಂದ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಫೆಬ್ರವರಿ 15 ಅರ್ಜಿ ಸಲ್ಲಿಸಲು ಕೊನೆಯ ದಿವಸವಾಗಿದೆ.

ಅಂದ ಹಾಗೇ ವೆಲ್ತ್ ಮ್ಯಾನೇಜ್ಮೆಂಟ್ ವಿಭಾಗದಲ್ಲಿನ ಹುದ್ದೆಗಳಿಗೆ ಈ ನೇಮಕ ನಡೆಯುತ್ತಿದ್ದು, ಐದು ವರ್ಷದ ಅವಧಿಗೆ ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳಲಾಗುತ್ತಿದೆ. ಇದೇ ವೇಳೆ ಅಭ್ಯರ್ಥಿಗಳ ಕಾರ್ಯನಿರ್ವಹಣೆಯ ಆಧಾರದಲ್ಲಿ ನೇಮಕಾವಧಿಯನ್ನು ಇನ್ನೂ ಐದು ವರ್ಷಗಳ ತನಕ ವಿಸ್ತರಿಸಲಾಗುವುದೆಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಸಂದರ್ಶನದ ಮೂಲಕ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ.ಹುದ್ದೆಗಳ ವಿವರ ಹಾಗೂ ಸಂಖ್ಯೆ: ರಿಲೇಷನ್ಶಿಪ್ ಮ್ಯಾನೇಜರ್-224, ಅಕ್ವಿಷಿಷನ್ ರಿಲೇಷನ್ಶಿಪ್ ಮ್ಯಾನೇಜರ್-80, ಇನ್ವೆಸ್ಟ್ಮೆಂಟ್ ಕೌನ್ಸೆಲರ್-33, ಕಸ್ಟಮರ್ ರಿಲೇಷನ್ಶಿಪ್ ಎಕ್ಸಿಕ್ಯುಟಿವ್-55, ಝೋನಲ್ ಹೆಡ್ (ಸೇಲ್ಸ್)-4, ಕಂಪ್ಲೀಯನ್ಸ್ ಆಫೀಸರ್, ಹೆಡ್ (ಆಪರೇಷನ್ಸ್) ಮತ್ತು ಮ್ಯಾನೇಜರ್-ತಲಾ 1, ಪ್ರಾಜೆಕ್ಟ್ ಡೆವಲಪ್ಮೆಂಟ್ ಮ್ಯಾನೇಜರ್-3, ಇನ್ವೆಸ್ಟ್ಮೆಂಟ್ ಅಡ್ವೈಸರ್-2 ಮತ್ತು ಸೆಂಟ್ರಲ್ ಆಪರೇಷನ್ಸ್ ಟೀಮ್ ಸಪೋರ್ಟ್-3

ಅರ್ಹತೆಗಳೇನು: ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಸೆಂಟ್ರಲ್ ರಿಸರ್ಚ್ ಟೀಮ್, ಹೆಡ್ ಮತ್ತು ಪ್ರಾಜೆಕ್ಟ್ ಡೆವಲಪ್ಮೆಂಟ್ ಮ್ಯಾನೇಜರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಆಯಾ ವಿಭಾಗಗಳಿಗೆ ಸಂಬಂಧಪಟ್ಟಂತೆ ಎಂಬಿಎ/ಎಂಎಂಎಸ್/ಪಿಜಿಡಿಎಂ/ಎಂಇ/ಎಂಟೆಕ್ ವಿದ್ಯಾರ್ಹತೆ ಹೊಂದಿರಬೇಕು. ಇನ್ನುಳಿದಂತೆ ರಿಲೇಷನ್ಶಿಪ್ ಮ್ಯಾನೇಜರ್, ಅಕ್ವಿಷಿಷನ್ ರಿಲೇಷನ್ಶಿಪ್ ಮ್ಯಾನೇಜರ್ ಸೇರಿದಂತೆ ಯಾವುದೇ ಹುದ್ದೆಗಳಿಗೂ ಅರ್ಜಿ ಸಲ್ಲಿಸಬೇಕಾದರೂ ಪದವೀಧರರಾಗಿರಬೇಕು.

ಅರ್ಜಿ ಶುಲ್ಕ: ಸಾಮಾನ್ಯ ಮತ್ತು ಇತರೆ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ 600 ರೂಪಾಯಿ ಮತ್ತು ಎಸ್ಸಿ/ಎಸ್ಟಿ/ಅಂಗವಿಕಲ ಅಭ್ಯರ್ಥಿಗಳಿಗೆ 100 ರೂ. ಶುಲ್ಕ ನಿಗದಿಪಡಿಸಲಾಗಿದೆ.

ಅರ್ಜಿ ಶುಲ್ಕವನ್ನು ಆನ್ಲೈನ್ನಲ್ಲಿಯೇ ಪಾವತಿಸಬಹುದಾಗಿದೆ.

ಇಂದಿನಿಂದ ಅರ್ಜಿ ಸಲ್ಲಿಕೆ ಆರಂಭ, ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ಫೆಬ್ರವರಿ 15, 2018 ಆಯ್ಕೆ ವಿಧಾನ-ಸಂದರ್ಶನದ ಮೂಲಕ ನೇಮಕ - ಸಹಾಯವಾಣಿ ಸಂಖ್ಯೆ: 022-2282 0427 

Edited By

Shruthi G

Reported By

Shruthi G

Comments