ಮತ್ತೆ ಕ್ಯಾತೆ ತೆಗೆದ ಗೋವಾ ಮಹದಾಯಿ ನೀರು ಬಿಡದಿರಲು ನಿರ್ಧಾರ?

30 Jan 2018 12:25 PM | General
355 Report

ಮಹದಾಯಿಗೆ ಅಡ್ಡಲಾಗಿ ಕರ್ನಾಟಕ ಕಾಲುವೆ ನಿರ್ಮಿಸಿದೆ. ಈ ಮೂಲಕ ನದಿಯ ನೀರನ್ನು ಮಲಫ್ರಭಾಕ್ಕೆ ಹರಿಸುತ್ತದೆ. ಇದರಿಂದ ಮಹದಾಯಿ ನದಿ ಒಣಗಿ ಹೋಗುತ್ತದೆ ಅಂತ ಕಣಕುಂಬಿಗೆ ಇತ್ತೀಚೆಗೆ ಭೇಟಿ ನೀಡಿದ್ದ ಗೋವಾದ ತಂಡದಲ್ಲಿದ್ದ ಗೋವಾದ ಉಪ ಮಹಾ ಸಭಾಪತಿ ಮೈಕಲ್​ ಲೋಬೋ ಹೇಳಿದ್ದು ಆತಂಕ ಮೂಡಿಸಿದೆ.

ಮಹದಾಯಿ ವಿವಾದ ತೀವ್ರ ಸ್ವರೂಪ ಗೋಚರಿಸುವ ಲಕ್ಷಣ ಕಾಣಿಸಿಕೊಳ್ಳುತ್ತಿದ್ದು, ಉತ್ತರ ಕರ್ನಾಟಕದ ಮಂದಿಗೆ ಇದೊಂದು ರೀತಿಯ ಶಾಕಿಂಗ್ ಸುದ್ದಿಯಾಗಿದೆ. ಹೌದು, ಮಹದಾಯಿ ನೀರು ವಿಚಾರವಾಗಿ ಗೋವಾ ಮತ್ತೆ ಕ್ಯಾತೆ ತೆಗೆಯುವುದಕ್ಕೆ ಮುಂದಾಗಿದ್ದು, ಈ ನಿಟ್ಟಿನಲ್ಲಿ ರಾಜ್ಯ ಸಂಸತ್ತಿನಲ್ಲಿ ಕರ್ನಾಟಕಕ್ಕೆ ನೀರು ಬಿಡದಿರಲು ನಿರ್ಣಯ ತೆಗೆದುಕೊಳ್ಳಲು ಮುಂದಾಗಿದೆ. ಗೋವಾ ಅಸೆಂಬ್ಲಿಯಲ್ಲಿ ಕರ್ನಾಟಕದ ವಿರುದ್ಧ ನಿರ್ಣಯ ತೆಗೆದುಕೊಂಡರೆ ಸಿಎಂ ಪರಿಕ್ಕರ್​ ಬರೆದ ಪತ್ರ ಮೌಲ್ಯ ಕಳೆದುಕೊಳ್ಳಲಿದೆ. ಆಗ ಪ್ರಧಾನಿಯೇ ಖುದ್ದು ಮಧ್ಯಸ್ಥಿಕೆ ವಹಿಸದ್ದರು ಕೂಡ ಉಭಯ ರಾಜ್ಯಗಳ ನೀರಿನ ಬಿಕ್ಕಟ್ಟು ಪರಿಹಾರ ಕಾಣುವುದಿಲ್ಲಇದರಿಂದ ಮಹದಾಯಿ ಬಿಕ್ಕಟ್ಟು ಇನ್ನಷ್ಟು ಕಗ್ಗಂಟಾಗಲಿದೆ.

Edited By

Shruthi G

Reported By

Madhu shree

Comments