ಮೇವು ಹಗರಣ 3ನೇ ಕೇಸ್ ನಲ್ಲೂ ಲಾಲು: 5ವರ್ಷ ಜೈಲು, 5 ಲಕ್ಷ ದಂಡ

24 Jan 2018 3:12 PM | General
387 Report

ಮೇವು ಹಗರಣದಲ್ಲಿ ಈಗಾಗಲೇ ಜೈಲುಕಂಬಿ ಎಣಿಸುತ್ತಿರುವ ಆರ್ ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಮೂರನೇ ಮೇವು ಹಗರಣದಲ್ಲೂ ದೋಷಿ ಎಂದು ರಾಂಚಿಯ ವಿಶೇಷ ಸಿಬಿಐ ನ್ಯಾಯಾಲಯ ತೀರ್ಪು ನೀಡಿ, 5 ವರ್ಷ ಜೈಲುಶಿಕ್ಷೆ, 5 ಲಕ್ಷ ರೂಪಾಯಿ ದಂಡ ವಿಧಿಸಿದೆ.

ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವ್ ಈಗಾಗಲೇ ಮೇವು ಹಗರಣದಲ್ಲಿ ಜೈಲುಶಿಕ್ಷೆ ಅನುಭವಿಸುತ್ತಿದ್ದಾರೆ. ಬಿಹಾರದ ಮತ್ತೊಬ್ಬ ಮಾಜಿ ಸಿಎಂ ಜಗನ್ನಾಥ್ ಮಿಶ್ರಾ ಕೂಡಾ 3ನೇ ಪ್ರಕರಣದಲ್ಲಿ ದೋಷಿಯಾಗಿದ್ದಾರೆ. ಮಿಶ್ರಾಗೂ ಕೂಡಾ 5 ವರ್ಷ ಜೈಲುಶಿಕ್ಷೆ, 5 ಲಕ್ಷ ರೂಪಾಯಿ ದಂಡ ವಿಧಿಸಿದೆ. 1990ರಲ್ಲಿ ಚಾಯ್ಬಾಸಾ ಸರಕಾರಿ ಖಜಾನೆಯಿಂದ 33.7 ಕೋಟಿ ರೂ.ಗಳನ್ನು ಅಕ್ರಮವಾಗಿ ಪಡೆದುಕೊಂಡ ಆರೋಪಕ್ಕೆ ಸಂಬಂಧಿಸಿದ ಕೇಸು ಈ 3ನೇ ಮೇವು ಹಗರಣದ್ದಾಗಿದೆ. ಮಂಜೂರಾಗಿದ್ದ ಕೇವಲ 7.1 ಲಕ್ಷ ರೂ.ಗೆ ಬದಲು ಲಾಲು 33.7 ಕೋಟಿ ರೂ.ಗಳನ್ನು ಡ್ರಾ ಮಾಡಿದ್ದರು.

Edited By

Shruthi G

Reported By

Madhu shree

Comments