ಶಾಕಿಂಗ್ ನ್ಯೂಸ್ : ದೆವ್ವವನ್ನು ವಿವಾಹವಾಗಿ ಜೀವನ ನಡೆಸುತ್ತಿದ್ದಾಳಂತೆ ಈಕೆ

24 Jan 2018 3:00 PM | General
538 Report

ಐರಿಶ್ ಮಹಿಳೆ ಅಮಂಡಾ ಟೀಗೂ ಹೇಳಿದ್ದನ್ನು ಕೇಳಿದ್ರೆ ಎಲ್ಲರೂ ಬೆಚ್ಚಿ ಬೀಳೋದು ಗ್ಯಾರಂಟಿ. ಅಮಂಡಾ ತಾನು ಕಾನೂನಾತ್ಮಕವಾಗಿ ದೆವ್ವವನ್ನು ವಿವಾಹವಾಗಿದ್ದಾಗಿ ಹೇಳಿಕೊಳ್ಳುತ್ತಿದ್ದಾಳೆ. ಜಾಕ್ ಟೀಗು ಎನ್ನುವ ವ್ಯಕ್ತಿ 1700ನೇ ಇಸವಿಯಲ್ಲಿ ಮೃತಪಟ್ಟಿದ್ದ. ಆತ ದೆವ್ವವಾಗಿದ್ದು, ತಾನು ಆ ದೆವ್ವವನ್ನೇ ವಿವಾಹವಾಗಿದ್ದಾಗಿ ಹೇಳಿದ್ದಾರೆ.

ಇಷ್ಟೇ ಅಲ್ಲದೇ ಆಕೆ ಹೇಳಿದ ಮತ್ತೊಂದು ವಿಚಾರ ಕೇಳಿದರೆ ನೀವು ಬೆರಗಾಗುತ್ತೀರಾ. ಆಕೆ ಆ ದೆವ್ವದೊಂದಿಗೆ ಉತ್ತಮ ಸೆಕ್ಸ್'ನ್ನು ಕೂಡ ನಡೆಸಿದ್ದಾಳಂತೆ.ಟೀಗೂ ಕಳೆದ ಅಕ್ಟೋಬರ್ 2017ರಲ್ಲಿ ಅಟ್ಲಾಂಟಿಕ್ ಓಶಿಯನ್ನಲ್ಲಿ ಮತ್ತೆ ಆ ದೆವ್ವದೊಂದಿಗೆ ವಿವಾಹವಾಗಿದ್ದು, ಈ ಸಂದರ್ಭವನ್ನು ಕುಟುಂಬ ಹಾಗೂ ಸ್ನೇಹಿತರೊಂದಿಗೆ ಸಂಭ್ರಮಾಚರಣೆ ಮಾಡಿದ್ದಾಗಿಯೂ ಕೂಡ ಹೇಳಿದ್ದಾಳೆ. ನಾಲ್ಕು ಮಕ್ಕಳ ತಾಯಿಯಾಗಿರುವ ಈಕೆ ವಿಚ್ಛೇದನ ಪಡೆದುಕೊಂಡಿದ್ದು, 300 ವರ್ಷಗಳ ಹಿಂದಿನ ತನ್ನ ಪ್ರಿಯತಮನ ದೆವ್ವವನ್ನು ವಿವಾಹವಾಗಿದ್ದಾಗಿ ಹೇಳಿದ್ದಾಳೆ.

Edited By

Shruthi G

Reported By

Madhu shree

Comments