ವಿಧವಾ ಮಹಿಳೆಯರಿಗೆ ಸಿಹಿ ಸುದ್ದಿ ನೀಡಲಿರುವ ಪ್ರಧಾನಿ ಮೋದಿ

24 Jan 2018 12:45 PM | General
327 Report

ವಿಧವೆಯರಿಗೆ 500 ರೂ. ಪಿಂಚಣಿ ನೀಡುತ್ತಿರುವುದು ಸಾಕಾಗುವುದಿಲ್ಲ ಎಂಬ ಮಾತು ಕೇಳಿಬರುತ್ತಿದೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸರ್ಕಾರ ಬಜೆಟ್‍ನಲ್ಲಿ ಒಂದು ಸಾವಿರ ರೂ. ಏರಿಕೆ ಮಾಡಿ ಘೋಷಣೆ ಮಾಡಲಿದೆ. ವಿಧವೆಯರಿಗೆ ಸಾಮಾಜಿಕ ಭದ್ರತೆ ಒದಗಿಸಲು ಮುಂದಾಗಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಬರಲಿರುವ ಬಜೆಟ್‍ನಲ್ಲಿ ಮಾಸಾಶನ ಹೆಚ್ಚಳ ಮಾಡಲು ಮುಂದಾಗಿದೆ.

ಒಂದು ವೇಳೆ ಅಂದುಕೊಂಡಂತೆ ನಡೆದದ್ದೇ ಆದರೆ ವಿಧವೆಯರಿಗೆ ನೀಡಲಾಗುತ್ತಿರುವ 500 ರೂ. ಮಾಸಾಶನವನ್ನು 1000 ರೂ.ಗೆ ಏರಿಕೆ ಮಾಡಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ. ಈ ಮೂಲಕ ಮಹಿಳೆಯರ ಮನಗೆಲ್ಲುವುದು ಒಂದೆಡೆಯಾದರೆ ಅವರಿಗೆ ಸಾಮಾಜಿಕ ಭದ್ರತೆಯನ್ನು ಒದಗಿಸಿದಂತಾಗುತ್ತದೆ ಎಂಬುದು ಸರ್ಕಾರದ ಉದ್ದೇಶ. ಈಗಾಗಲೇ ಕೇಂದ್ರದ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಇಲಾಖೆ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ್ದಾರೆ. ವಿಧವಾ ವೇತನವನ್ನು ಏರಿಕೆ ಮಾಡುವುದರಿಂದ ಸರ್ಕಾರಕ್ಕೆ ಹೊರೆಯಾಗುವುದಿಲ್ಲ. ತಿಂಗಳಿಗೆ ಒಂದು ಸಾವಿರ ಪಿಂಚಣಿ ನೀಡಿದರೆ ಕಡೆಪಕ್ಷ ಯಾರ ಮೇಲೂ ಅವಲಂಬಿತವಾಗದೆ ಜೀವನ ನಡೆಸಲು ಅನುಕೂಲವಾಗುತ್ತದೆ ಎಂಬ ಸಲಹೆಯನ್ನು ಅಧಿಕಾರಿಗಳು ನೀಡಿದ್ದಾರೆ. ಬೊಕ್ಕಸಕ್ಕೆ ಎಷ್ಟೇ ಹೊರೆಯಾದರೂ ಸರಿ ವಿಧವೆಯರ ಮಾಸಾಶನವನ್ನು ಏರಿಕೆ ಮಾಡಬೇಕೆಂದು ಖುದ್ದು ಪ್ರಧಾನಿ ನರೇಂದ್ರ ಮೋದಿ ಅವರೇ ಸೂಚಿಸಿದ್ದಾರೆ. ಫೆ.1ರಂದು ಮಂಡನೆಯಾಗಲಿರುವ ಕೇಂದ್ರ ಸರ್ಕಾರದ ಬಜೆಟ್‍ನಲ್ಲಿ ಹಣಕಾಸು ಖಾತೆಯನ್ನು ಹೊಂದಿರುವ ಅರುಣ್ ಜೇಟ್ಲಿ ಇದನ್ನು ಅಧಿಕೃತವಾಗಿ ಘೋಷಣೆ ಮಾಡಲಿದ್ದಾರೆ ಎಂದು ಕೇಂದ್ರ ಸರ್ಕಾರ ಅಧಿಕೃತವ ಮೂಲಗಳು ತಿಳಿಸಿವೆ.

Edited By

Shruthi G

Reported By

Madhu shree

Comments