ಈ ವಿದ್ಯಾರ್ಥಿಗಳ ಬ್ಯಾಗ್ ನಲ್ಲಿ ಏನಿತ್ತು ಎಂದು ಅಂತ ಕೇಳಿದ್ರೆ ದಂಗಾಗ್ತೀರಾ..!!

23 Jan 2018 9:48 AM | General
302 Report

ಕೆಲ ದಿನಗಳ ಹಿಂದೆ ಗುರ್ಗಾಂವ್ ನ ರಯಾನ್ ಇಂಟರ್ ನ್ಯಾಷನಲ್ ಸ್ಕೂಲ್ ನಲ್ಲಿ ಯಾರಾದರೂ ಸತ್ತರೆ ಪರೀಕ್ಷೆ ಮುಂದೂಡುತ್ತಾರೆಂಬ ಕ್ಷುಲ್ಲಕ ಕಾರಣಕ್ಕೆ ವಿದ್ಯಾರ್ಥಿಯೊಬ್ಬ ತನ್ನದೇ ಶಾಲೆಯ ಪುಟ್ಟ ಬಾಲಕನನ್ನು ಹತ್ಯೆ ಮಾಡಿದ್ದ. ಇತ್ತೀಚೆಗಷ್ಟೇ ಲಕ್ನೋದಲ್ಲಿ 6 ನೇ ತರಗತಿ ವಿದ್ಯಾರ್ಥಿನಿಯೊಬ್ಬಳು ರಜೆ ಸಿಗಲೆಂಬ ಕಾರಣಕ್ಕೆ 1 ನೇ ತರಗತಿ ವಿದ್ಯಾರ್ಥಿಯನ್ನು ಚಾಕುವಿನಿಂದ ಇರಿದಿದ್ದು, ಗಾಯಗೊಂಡಿದ್ದ ಬಾಲಕ ಈಗ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾನೆ.

ಮಕ್ಕಳಲ್ಲಿ ಹಿಂಸಾ ಪ್ರವೃತ್ತಿ ಹೆಚ್ಚುತ್ತಿರುವ ಕಾರಣ ಆತಂಕಗೊಂಡಿರುವ ಲಕ್ನೋದ ಹಲ ಶಾಲೆಗಳ ಶಿಕ್ಷಕರು, ವಿದ್ಯಾರ್ಥಿ-ವಿದ್ಯಾರ್ಥಿನಿಯರ ಬ್ಯಾಗ್ ಚೆಕ್ ಮಾಡಿದ್ದು, ಅದರಲ್ಲಿ ಕಂಡು ಬಂದ ವಸ್ತುಗಳನ್ನು ನೋಡಿ ಅಕ್ಷರಶಃ ಶಾಕ್ ಆಗಿದ್ದಾರೆ. 9 ನೇ ತರಗತಿ ವಿದ್ಯಾರ್ಥಿಯೊಬ್ಬ ಸೆಕ್ಸ್ ಮ್ಯಾಗಜೀನ್ ಗೆ ಶಾಲಾ ಪಠ್ಯ ಪುಸ್ತಕದಂತೆ ಬೈಂಡ್ ಮಾಡಿ ಅದಕ್ಕೆ ಲೇಬಲ್ ಸಹ ಅಂಟಿಸಿದ್ದನೆನ್ನಲಾಗಿದೆ. ಇನ್ನು ಕೆಲ ವಿದ್ಯಾರ್ಥಿಗಳ ಬ್ಯಾಗ್ ನಲ್ಲಿ ಸಿಗರೇಟ್, ಲೈಟರ್, ಚಾಕು, ರೇಜರ್, ಐ ಪ್ಯಾಡ್, ಮೊಬೈಲ್ ಫೋನ್ ಸಿಕ್ಕಿವೆ. ವಿದ್ಯಾರ್ಥಿನಿಯರ ಬ್ಯಾಗ್ ನಲ್ಲಿ ಲಿಪ್ ಸ್ಟಿಕ್, ನೇಲ್ ಪಾಲಿಶ್, ರೇಜರ್, ಮೊಬೈಲ್ ಫೋನ್ ಮೊದಲಾದ ವಸ್ತುಗಳು ಸಿಕ್ಕಿವೆ. ಈ ವಿದ್ಯಾರ್ಥಿಗಳ ಪೋಷಕರಿಗೆ ಈಗ ಮಾಹಿತಿ ನೀಡಲಾಗಿದ್ದು, ಒಂದು ಶಾಲೆಯಲ್ಲಿ ಸಾವಿರಾರು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿರುವ ಕಾರಣ ಪ್ರತಿ ದಿನವೂ ವಿದ್ಯಾರ್ಥಿಗಳ ಬ್ಯಾಗ್ ಚೆಕ್ ಮಾಡಲಾಗುವುದಿಲ್ಲ. ಪೋಷಕರೇ ತಮ್ಮ ಮಕ್ಕಳು ಮನೆಯಿಂದ ಹೊರಡುವಾಗ ಬ್ಯಾಗ್ ಪರೀಕ್ಷಿಸುವುದು ಒಳಿತು ಎಂದು ಶಿಕ್ಷಕರು ಹೇಳುತ್ತಾರೆ.

Edited By

Shruthi G

Reported By

Madhu shree

Comments