ಬಾರದ ಲೋಕಕ್ಕೆ ಪಯಣಿಸಿದ ನಟ ಕಾಶಿನಾಥ್ ಗೆ ಕಂಬನಿ ಮಿಡಿದ ಗಣ್ಯರು

18 Jan 2018 6:32 PM | General
401 Report

ಚಂದನವನದಲ್ಲಿ ತಮ್ಮದೇ ಆದ ವಿಶಿಷ್ಟ ನಟನಾ ಶೈಲಿಯಿಂದ ಸಾವಿರಾರು ಅಭಿಮಾನಿಗಳನ್ನು ಪಡೆದಿದ್ದ ಕಾಶಿನಾಥ್(65) ಅವರು ಇನ್ನಿಲ್ಲ ಎಂಬ ಸುದ್ದಿಯನ್ನು ಅರಗಿಸಿಕೊಳ್ಳುವುದು ಕಷ್ಟವೇ. ಕಾಶಿನಾಥ್ ಸಾವಿನ ಸುದ್ದಿ ಕೇಳಿ ಸಿನಿರಂಗ ಹಾಗೂ ರಾಜಕೀಯ ರಂಗದ ಹಲವಾರು ಗಣ್ಯರು ಸಂತಾಪ ಸೂಚಿಸಿದ್ದು, ‘ದಿ-ವಿಲನ್’ ಚಿತ್ರತಂಡ ಚಿತ್ರೀಕರಣವನ್ನು ಸ್ಥಗಿತಗೊಳಿಸಿ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದೆ .

ನಟ ಕಾಶೀನಾಥ್ ಅಗಲಿಕೆ ಬಗ್ಗೆ ಪ್ರತಿಕ್ರಿಯಿಸಿದ ನಿರ್ದೇಶಕ ಸುರೇಶ್ ಹೆಬ್ಳಿಕರ್, ''ವಿಮರ್ಶಕರೊಬ್ಬರು ನಟ ಕಾಶೀನಾಥ್ ಚಿತ್ರಗಳನ್ನು ಬೆಸ್ಟ್ ಎಂದಿದ್ದರು. ಅವರು ಮೌನಿ ಮನುಷ್ಯ, ಅಗತ್ಯವಿದ್ದಷ್ಟು ಮಾತ್ರ ಮಾತನಾಡುತ್ತಿದ್ದರು. ತುಂಬಾ ಕಷ್ಟಪಟ್ಟು ಕೆಲಸ ಮಾಡುತ್ತಿದ್ದರು'' ಎಂದು ಅಭಿಪ್ರಾಯ ಹಂಚಿಕೊಂಡಿದ್ದಾರೆ.ಹಿರಿಯ ನಟ, ನಿರ್ದೇಶಕ ಕಾಶಿನಾಥ್ ವಿಧಿವಶರಾಗಿರೋ ಹಿನ್ನೆಲೆಯಲ್ಲಿ ನಟ ಉಪೇಂದ್ರ, ಶಿವರಾಜ್‍ಕುಮಾರ್, ಸುದೀಪ್, ತರುಣ್ ಸುಧೀರ್, ವಿ. ಮನೋಹರ್, ಬಿಗ್‍ಬಾಸ್ ಪ್ರಥಮ್, ಸೇರಿದಂತೆ ಹಲವಾರು ಚಿತ್ರರಂಗದ ಕಲಾವಿದರು ಅಂತಿಮ ದರ್ಶನ ಪಡೆದಿದ್ದಾರೆ. 'ಕಾಶಿನಾಥ್ ಅವರು ನನ್ನ ಪಾಲಿನ ದೇವರು, ಅವರ ಮನೆ ನನ್ನ ಪಾಲಿಗೆ ದೇವಸ್ಥಾನ' ಎಂದು ನಟ,ಕೆಪಿಜೆಪಿ ಸ್ಥಾಪಕ ಉಪೇಂದ್ರ ಕಣ್ಣೀರಿಟ್ಟಿದ್ದಾರೆ.. ಕಾಶಿನಾಥ್ ಅವರಿಗೆ ಸಾಯುವಂತಹ ವಯಸ್ಸೇನೂ ಆಗಿರಲಿಲ್ಲ. ನಗುತ್ತಾ, ನಗಿಸುತ್ತಾ ಕನ್ನಡ ಚಿತ್ರರಸಿಕರನ್ನು ರಂಜಿಸುತ್ತಾ ಬಂದ ಕಾಶಿನಾಥ್, ಇನ್ನಷ್ಟು ದಿನ ಇರಬೇಕಿತ್ತು. ಅವರ ಕುಟುಂಬಕ್ಕೆ ನನ್ನ ಸಂತಾಪಗಳು ಎಂದು ಸಿಎಂ ಟ್ವೀಟ್ ಮಾಡಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ, ದಶಕಗಳಿಂದ ನಮ್ಮನ್ನು ರಂಜಿಸಿದ ವ್ಯಕ್ತಿ ಇನ್ನಿಲ್ಲ ಎಂಬುದನ್ನು ಊಹಿಸಿಕೊಳ್ಳಲಿಕ್ಕೇ ಅಸಾಧ್ಯ- ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ. ಹಿರಿಯ ನಟ, ನಿರ್ಮಾಪಕ, ನಿರ್ದೇಶಕ ಕಾಶಿನಾಥ್ ಅವರು ಅನಂತ ಪ್ರತಿಭೆಯ ಗಣಿ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಮತ್ತು ನಟಿ ಉಮಾಶ್ರೀ ಹೇಳಿದ್ದಾರೆ.

ಕರ್ನಾಟಕ ಕಾಂಗ್ರೆಸ್ ಟ್ವೀಟ್, ಹೊಸ ಅಲೆ ಚಿತ್ರಗಳ ಪ್ರವರ್ತಕ, ಅತ್ಯುತ್ತಮ ನಟ ಹಾಗೂ ನಿರ್ದೇಶಕ ಎಂದ ಕರ್ನಾಟಕ ಕಾಂಗ್ರೆಸ್ ಟ್ವೀಟ್.  ಹಲವು ತಲೆಮಾರುಗಳಿಗೆ ನಗಲು ಕಲಿಸಿದ ಚೈತನ್ಯ ಹಲವು ತಲೆಮಾರುಗಳಿಗೆ ನಗಲು ಕಲಿಸಿದ ಚೈತನ್ಯ ಎಂದು ಹೊಗಳಿದ ಬಿಜೆಪಿ ವಕ್ತಾರೆ ಮಾಳವಿಕಾ ಅವಿನಾಶ್. ನಗರಾಭಿವೃದ್ಧಿ ಸಚಿವ ಕೆಜೆ ಜಾರ್ಜ್, ಚಂದನವನದ ನಟ, ನಿರ್ದೇಶಕ,ಕಲಾಯೋಗಿ ಹಲವು ಹೊಸ ಪ್ರತಿಭೆಗಳಿಗೆ ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿದ ಮಹಾನ್ ವ್ಯಕ್ತಿ, ಕಾಶಿನಾಥ್ ಅವರ ಸಾವಿನ ಸುದ್ದಿ ಕೇಳಿ ತುಂಬಾ ದುಃಖವಾಗಿದೆ- ನಗರಾಭಿವೃದ್ಧಿ ಸಚಿವ ಕೆಜೆ ಜಾರ್ಜ್. ಎಚ್ ಡಿ ಕುಮಾರಸ್ವಾಮಿ ಅವರಿಂದ ಟ್ವೀಟ್,  ಕನ್ನಡ ಚಿತ್ರರಂಗವು ಅತ್ಯಮೂಲ್ಯ ರತ್ನದಂತಿದ್ದ ನಟ,ನಿರ್ದೇಶಕರೊಬ್ಬರನ್ನು ಕಳೆದುಕೊಂಡಿದ್ದು, ಕಾಶಿನಾಥ್ ರವರ ಅಗಲಿಕೆಗೆ ತೀವ್ರ ಸಂತಾಪವನ್ನು ಸೂಚಿಸುತ್ತೇನೆ-ಎಚ್ ಡಿ ಕುಮಾರಸ್ವಾಮಿ. ನಟ ಜಗ್ಗೇಶ್ ರಿಂದ ಸರಣಿ ಟ್ವೀಟ್, ತಾನಾಯಿತು ತನ್ನ ಕಾರ್ಯವಾಯಿತು ಅಂತ ಬದುಕಿದ ಸಂಭಾವಿತ ಕಾಶಿನಾಥ್-ನಟ ಜಗ್ಗೇಶ್ ಪ್ರತಿಭೆಗಳನ್ನು ಪರಿಚಯಿಸಿದ ಮಹನೀಯ ಕನ್ನಡ ಚಿತ್ರರಂಗಕ್ಕೆ ಹಲವಾರು ಪ್ರತಿಭೆಗಳನ್ನು ಪರಿಚಯಿಸಿದ ಮಹನೀಯನ ಆತ್ಮಕ್ಕೆ ಶಾಂತಿ ಸಿಗಲಿ- ಸಂಸದ ರಾಜೀವ್ ಚಂದ್ರಶೇಖರ್.

 

Edited By

Shruthi G

Reported By

Madhu shree

Comments