ಚಾಕಲೇಟ್ ಬಣ್ಣದಲ್ಲಿ 10 ರೂ. ಹೊಸ ನೋಟು

05 Jan 2018 6:09 PM | General
307 Report

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಸದ್ಯದಲ್ಲೇ ಹೊಸ ಹತ್ತು ರೂಪಾಯಿ ನೋಟನ್ನು ಬಿಡುಗಡೆ ಮಾಡಲಿದೆ. ಮಹಾತ್ಮಾ ಗಾಂಧಿ ಸರಣಿಯ ಈ ನೋಟು ಚಾಕಲೇಟ್ ಕಲರ್ ಹೊಂದಿದೆ. ಕೋನಾರ್ಕದ ಸೂರ್ಯ ದೇವಾಲಯದ ಚಿತ್ರ ನೋಟಿನಲ್ಲಿರುವ ವಿಶೇಷತೆ. ಆರ್ ಬಿ ಐ ಗವರ್ನರ್ ಉರ್ಜಿತ್ ಪಟೇಲ್ ರ ಸಹಿ ಕೂಡ ಇದರ ಮೇಲಿದೆ.

ನೋಟಿನ ಮೇಲೆ ಮುಖಬೆಲೆ 10 ಎಂದು ಮುದ್ರಿಸಲಾಗಿದೆ. 10 ಎಂಬ ಸಂಖ್ಯೆ ದೇವನಾಗರಿ ಲಿಪಿಯಲ್ಲಿದೆ.ನೋಟಿನ ಮಧ್ಯದಲ್ಲಿ ಮಹಾತ್ಮಾ ಗಾಂಧಿ ಚಿತ್ರವಿದೆ. ಆರ್ ಬಿ ಐ, ಭಾರತ, ಇಂಡಿಯಾ, 10 ಎಲ್ಲವನ್ನೂ ಮೈಕ್ರೋ ಲೆಟರ್ ನಲ್ಲಿ ಬರೆಯಲಾಗಿದೆ. ಸೆಕ್ಯೂರಿಟಿ ಥ್ರೆಡ್ ಮೇಲೆ ಭಾರತ ಮತ್ತು ಆರ್ ಬಿ ಐ ಎಂಬ ಬರಹವಿದೆ. ಆರ್ ಬಿ ಐ ಲಾಂಛನ, ಗವರ್ನರ್ ಸಹಿ, ಗ್ಯಾರಂಟಿ ಷರತ್ತುಗಳನ್ನು ಮುದ್ರಿಸಲಾಗಿದೆ. ಬಲಭಾಗದಲ್ಲಿ ಅಶೋಕ ಸ್ಥಂಭದ ಲಾಂಛನವಿದೆ. ನೋಟಿನ ಹಿಂಭಾಗದಲ್ಲಿ ಎಡಗಡೆ ಮುದ್ರಣ ದಿನಾಂಕವಿದೆ.ಸ್ವಚ್ಛ ಭಾರತ ಲೋಗೋ ಮತ್ತು ಸ್ಲೋಗನ್ ಮುದ್ರಿಸಲಾಗಿದೆ. ಲಾಂಗ್ವೇಜ್ ಪ್ಯಾನಸ್, ಸೂರ್ಯ ದೇವಾಲಯದ ಚಿತ್ರವಿದೆ. 10 ಎಂಬ ಅಂಕಿಯನ್ನು ದೇವನಾಗರಿಯಲ್ಲಿ ಬರೆಯಲಾಗಿದೆ. ಹೊಸ 10 ರೂ. ನೋಟಿನ ಅಳತೆ 63mm X 123 mm

Edited By

Shruthi G

Reported By

Madhu shree

Comments