ವಾಯುಪಡೆಯ ಮಿಗ್-27 ಎಂಎಲ್ ಬಹದ್ದೂರ್ ಗೆ ನಿವೃತ್ತಿ

30 Dec 2017 5:28 PM | General
408 Report

ಕೋಲ್ಕತ್ತಾದ ಹಸೀಮರಾ ವಾಯು ನೆಲೆಯಲ್ಲಿ ಶುಕ್ರವಾರ ಸಂಜೆ ನಡೆದ ಸರಳ ಸಮಾರಂಭದ ವೇಳೆ ತನ್ನ ಕೊನೆಯ ಹಾರಾಟ ನಡೆಸಿದ ಬಹದ್ದೂರ್ ಗೆ ನಿವೃತ್ತಿ ನೀಡಲಾಯಿತು. 1980ರ ದಶಕದಲ್ಲಿ ವಾಯುಸೇನೆಗೆ ಸೇರ್ಪಡೆಗೊಂಡ ರಷ್ಯಾ ನಿರ್ಮಿತ ಮಿಗ್-27 ಎಂಎಲ್ ಬಹದ್ದೂರ್ ನಾಲ್ಕು ದಶಕಗಳ ಕಾಲ ಸೇವೆ ಸಲ್ಲಿಸಿದ್ದ ಹೆಗ್ಗಳಿಕೆಗೆ ಪಾತ್ರವಾಗಿದೆ.

ಶಕಗಳಿಂದ ಭಾರತೀಯ ವಾಯುಪಡೆಯ ಸಂಗಾತಿಯಾಗಿದ್ದ ಮಿಗ್-27 ಎಂಎಲ್ ಬಹದ್ದೂರ್ ಹೆಸರಿನ ವಿಮಾನಕ್ಕೆ ವಿದಾಯ ಹೇಳಲಾಗಿದೆ. ಇನ್ನು ಈ ಬಹದ್ದೂರ್ ಯುದ್ಧ ವಿಮಾನಕ್ಕೆ ಬಾಂಬ್, ರಾಕೆಟ್ ಹಾಗೂ ವಿಧ್ವಂಸಕಾರಿ ಶಸ್ತ್ರಾಸ್ತ್ರಗಳನ್ನು ಹೊತ್ತೊಯ್ಯಬಲ್ಲ ಸಾಮರ್ಥ್ಯವಿತ್ತು. ಇವುಗಳನ್ನು ನಿರ್ವಹಿಸಲು ಬೇಕಾದ ಕಂಪ್ಯೂಟರ್ ತಂತ್ರಜ್ಞಾನವೂ ಇತ್ತು.

Edited By

Suresh M

Reported By

Madhu shree

Comments