ಕನ್ನಡಿಗರಿಗೆ ಉದ್ಯೋಗ ನೀಡಬೇಕೆಂದು ಒತ್ತಾಯಿಸಿ ಕರವೇ ಪ್ರತಿಭಟನೆ

23 Dec 2017 3:35 PM | General
509 Report

ಕನ್ನಡಿಗರಿಗೆ ಕಡ್ಡಾಯ ಉದ್ಯೋಗವನ್ನು ನೀಡಬೇಕೆಂದು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ನಗರದ ನ್ಯಾಷನಲ್ ಕಾಲೇಜು ಆವರಣದಲ್ಲಿ ಶನಿವಾರ ಪ್ರತಿಭಟನೆ ನಡೆಸಿದರು. ಮೂವತ್ತು ಜಿಲ್ಲೆಗಳಿಂದ 15 ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ಆಗಮಿಸಿದ್ದರು. ಬೆಳಗ್ಗೆ ರೈಲ್ವೆ ನಿಲ್ದಾಣಕ್ಕೆ ಬಂದಿಳಿದ ಕಾರ್ಯಕರ್ತರು ನಂತರ ರೈಲ್ವೆ ನಿಲ್ದಾಣದಿಂದಲೇ ಮೆರವಣಿಗೆ ನಡೆಸಿದರು.

ಕನ್ನಡಿಗರಿಗೆ ಕಡ್ಡಾಯ ಶಿಕ್ಷಣ ದೊರೆಯಬೇಕು ಎಂದು ಘೋಷಣೆ ಕೂಗುತ್ತಾ ಧ್ವನಿವರ್ದಕಗಳನ್ನು ಹಾಕಿಕೊಂಡು ಕನ್ನಡದ ಧ್ವಜವನ್ನು ಕೈಯಲ್ಲಿ ಹಿಡಿದು ಬಸ್, ಬೈಕ್ ಗಳ ಮೂಲಕ ಮೆರವಣಿಗೆ ನಡೆಸಿದರು. ಕರವೇ ಬೃಹತ್ ಪ್ರತಿಭಟನಾ ಮೆರವಣಿಗೆ ನ್ಯಾಷನಲ್ ಕಾಲೇಜು ಮೈದಾನದಿಂದ ಸ್ವಾತಂತ್ರ್ಯ ಉದ್ಯಾನಕ್ಕೆ ಹೊರಟಿರುವ ಕಾರಣ ಕೆ.ಆರ್. ಮಾರುಕಟ್ಟೆ ಸುತ್ತಮುತ್ತಲ ಪ್ರದೇಶದಲ್ಲಿ ಸಂಚಾರ ದಟ್ಟಣೆ ಉಂಟಾಗಿದೆ.

ಸ್ಥಳೀಯರಿಗೆ ಉದ್ಯೋಗದಲ್ಲಿ ಅವಕಾಶ ಕೊಡಬೇಕು ಎನ್ನುವ ಡಾ. ಸರೋಜಿನಿ ಮಹಿಷಿ ವರದಿಯಿದ್ದರೂ ಅದು ಸಮರ್ಥವಾಗಿ ಜಾರಿಯಾಗಿಲ್ಲ. ಸ್ಥಳೀಯರಿಗೆ ಉದ್ಯೋಗದ ಕುರಿತು ಸಮರ್ಥವಾದ ನೀತಿಯೊಂದು ಜಾರಿಯಾಗದ ಫಲವಾಗಿ ಕಳೆದ ಇಪ್ಪತ್ತೈದು ವರ್ಷಗಳಲ್ಲಿ ಜಾಗತೀಕರಣ ನಂತರ ನಮ್ಮ ರಾಜ್ಯದ ಪ್ರಮುಖ ಊರುಗಳು ದೊಡ್ಡ ಮಟ್ಟದಲ್ಲಿ ಹುಟ್ಟಿರುವ ಬಹುತೇಕ ಖಾಸಗಿ ಉದ್ಯೋಗಗಳು ಪರರಾಜ್ಯದವರ ಪಾಲಾಗಿದೆ.

Edited By

Suresh M

Reported By

Madhu shree

Comments