ಸ್ಯಾಂಡಲ್'ವುಡ್ ಬೆಚ್ಚಿ ಬೀಳಿಸುವ ಸ್ಫೋಟಕ ಸುದ್ದಿ

22 Dec 2017 3:50 PM | General
366 Report

ಕನ್ನಡ ಚಲನ ಚಿತ್ರರಂಗ ಬೆಚ್ಚಿ ಬೀಳಿಸುವ ಸ್ಫೋಟಕ ಸುದ್ದಿಯೊಂದು ಬಯಲಾಗಿದೆ. ವೇಶ್ಯಾವಾಟಿಕೆಯಲ್ಲಿ ಸಿಕ್ಕಿಬಿದ್ದ ಯುವತಿ ಸ್ಯಾಂಡಲ್‌ವುಡ್' ಸ್ಟಾರ್ ನಟರಿಬ್ಬರ ಹೆಸರನ್ನು ಬಾಯಿ ಬಿಟ್ಟಿದ್ದಾಳೆ. ಸ್ಯಾಂಡಲ್'ವುಡ್ ಸ್ಟಾರ್ ನಟರಾದ ಸಾಧು ಕೋಕಿಲಾ, ಮಂಡ್ಯ ರಮೇಶ್​ ನನ್ನನ್ನು ಬಳಸಿಕೊಂಡಿದ್ದಾರೆ ಎಂದು ಯುವತಿ ಆರೋಪ ಮಾಡಿದ್ದಾಳೆ.

 ಈ ನಟರು  ಇಲ್ಲಿಗೆ  ಬರುತ್ತಿದ್ದರು.  ಅಲ್ಲಿ ಇರಲು ಕೂಡ ತನಗೆ ಹಿಂಸೆಯಾಗುತ್ತಿತ್ತು. ಅವರು ಹೇಳಿದಂತೆ ಕೇಳಬೇಕಿತ್ತು. ಇಲ್ಲವಾದಲ್ಲಿ  ಕೆಲಸದಿಂದ ತೆಗೆಯುವುದಾಗಿ ಹೆದರಿಸುತ್ತಿದ್ದರು. ಪೊಲೀಸರಿಗೆ ದೂರು ನೀಡುವುದಾಗಿ ಕೂಡ ಹೇಳುತ್ತಿದ್ದರು ಎಂದು ಹೇಳಿದ್ದಾಳೆ. ಆದರೆ ಮಂಡ್ಯ ರಮೇಶ್ ಈ ಸುದ್ದಿಯನ್ನು ಅಲ್ಲಗಳೆದಿದ್ದಾರೆ. ತಮಗೂ ಈ ಕೇಸ್'ಗೂ ಯಾವುದೇ ರೀತಿಯಾದ ಸಂಬಂಧವಿಲ್ಲವೆಂದು ಹೇಳಿದ್ದಾರೆ. ಈ ಅಪಾದನೆ ನನಗೆ ನೋವುಂಟು ಮಾಡಿದೆ ಎಂದಿದ್ದಾರೆ.  ನನ್ನ ಜವಾಬ್ದಾರಿ ಕೆಲಸ ಏನು ಎನ್ನುವ ಬಗ್ಗೆ ನನಗೆ ಅರಿವಿದೆ.  ಉದ್ಘಾಟನೆ ಆದ ಮೇಲೆ ಆ ಪಾರ್ಲರ್'ಗೆ ನಾನು ಒಂದೇ ಬಾರಿ ಹೋಗಿದ್ದೆ.

ಆರೋಪ ಮಾಡುತ್ತಿರುವ ಹುಡುಗಿಯ ಪರಿಚಯವೂ ಕೂಡ ನನಗೆ ಇಲ್ಲ. ಎಲ್ಲರೊಂದಿಗೂ ಕೂಡ ನಾನು ಅತ್ಯಂತ ಸ್ನೇಹದಿಂದ ಇರುತ್ತೇನೆ. ಜನರು ನನ್ನನ್ನು ಪ್ರೀತಿಸುತ್ತಾರೆ. ಆದರೆ ಆ ಹುಡುಗಿ ಆರೋಪ ಮಾಡುತ್ತಿರುವುದು ಸುಳ್ಳು, ಇದರ ಹಿಂದೆ ಯಾವುದೇ ರೀತಿಯಾದ ಒತ್ತಡ  ಇರಬಹುದು ಎಂದು ಹೇಳಿದ್ದಾರೆ. ಒಡನಾಡಿ ಸಂಸ್ಥೆಯೊಂದಿಗೆ  ನನಗೆ ಉತ್ತಮ ಬಾಂಧವ್ಯವಿದೆ. ಸ್ಪಾ ಓನರ್ ರಾಜೇಶ್ ಮತ್ತು ಹುಡುಗಿಯ ನಡುವಿನ ವೈಮನಸ್ಸಿನಿಂದ  ಈ ಆರೋಪ ಮಾಡಿರಬಹುದು ಎಂದಿದ್ದಾರೆ.

Edited By

Suresh M

Reported By

Madhu shree

Comments