ಕುಮಾರ್‌‌ ಬಂಗಾರಪ್ಪಗೆ ಟಾಂಗ್‌‌ ಕೊಟ್ಟ ಜೆಡಿಎಸ್ ಮುಖಂಡ ಮಧು ಬಂಗಾರಪ್ಪ

21 Dec 2017 5:22 PM | General
15746 Report

ಸಿದ್ದರಾಮಯ್ಯ ಅವರಿಂದ ಸರ್ಕಾರದ ದುಡ್ಡು, ಅಧಿಕಾರ ದುರುಪಯೋಗವಾಗುತ್ತಿದೆ. ಹಾಗೆಯೇ ಬಿಜೆಪಿಯ ಪರಿವರ್ತನಾ ಯಾತ್ರೆ ಕೇವಲ ಸಿದ್ದರಾಮಯ್ಯ ವಿರುದ್ಧ ಟೀಕೆ, ಬೈಗುಳಕ್ಕೆ ಸೀಮಿತವಾಗಿದೆ ಎಂದು ಜೆಡಿಎಸ್ ಮುಖಂಡ ಮಧು ಬಂಗಾರಪ್ಪ ಟೀಕಿಸಿದ್ದಾರೆ.

ನಗರದಲ್ಲಿ ಮಾತನಾಡಿದ ಜೆಡಿಎಸ್ ಮುಖಂಡ ಮಧು ಬಂಗಾರಪ್ಪ ನವರು, ಮಹದಾಯಿ ಸಮಸ್ಯೆಯನ್ನು ಯಾರೇ ಬಗೆಹರಿಸಿದರು ಜೆಡಿಎಸ್ ಸ್ವಾಗತಿಸುತ್ತದೆ.ಆದರೆ ಇದು ಚುನಾವಣೆಗೆ ಸೀಮಿತ ಆಗದಿರಲಿ ಎಂದರು.ನಾನು ದಿಕ್ಕು ತಪ್ಪುವ ಮಗನಲ್ಲ ಎಂದ ಅವರು, ಕಾಂಗ್ರೆಸ್‌‌ನಲ್ಲಿ ಇದ್ದವರು ಇದೀಗ ದಿಕ್ಕು ತಪ್ಪಿ ಬಿಜೆಪಿಗೆ ಹೋಗಿದ್ದಾರೆ ಎನ್ನುವ ಮೂಲಕ ಪರೋಕ್ಷವಾಗಿ ಕುಮಾರ್‌‌ ಬಂಗಾರಪ್ಪಗೆ ಟಾಂಗ್‌‌ ನೀಡಿದ್ದಾರೆ.

ರಾಜ್ಯದಲ್ಲಿ ಒಬ್ಬರು ಜಾತಿ ಒಡೆಯುತ್ತಿದ್ದಾರೆ. ಮತ್ತೊಬ್ಬರು ಧರ್ಮ ಒಡೆಯುತ್ತಿದ್ದಾರೆ. ಬೆಂಕಿ ಹಚ್ಚುವ ಕೆಲಸ ಮಾಡುವವರು ದೇಶದ್ರೋಹಿಗಳಲ್ವ ಎಂದು ಪ್ರಶ್ನಿಸಿದರು.ಚುನಾವಣೆ ಸಂದರ್ಭ ಬಂದಾಗ ಸಹೋದರಿ ಗೀತಾ ಶಿವರಾಜ್‌‌ಕುಮಾರ್‌‌ ತಮ್ಮ ಕರ್ತವ್ಯ ನಿರ್ವಹಿಸುತ್ತಾರೆ. ಸದ್ಯಕ್ಕೆ ಅವರಿಗೆ ಒತ್ತಡ ಹಾಕಲ್ಲ. ಪ್ರಧಾನಿ ಮೋದಿ, ಸಿಎಂ ಸಿದ್ದರಾಮಯ್ಯ ಅಬ್ಬರ ನಡೆಯಲ್ಲ. ಅವರಿಬ್ಬರು ಕಚ್ಚಾಡಿಕೊಳ್ಳಬಹುದಷ್ಟೆ. ಜೆಡಿಎಸ್‌‌ಗೆ ಏನೂ ಆಗಲ್ಲ ಎಂದರು.ಜಿ.ಟಿ.ದೇವೇಗೌಡರನ್ನ ಜೈಲಿಗೆ ಹಾಕಿದರು ಅಲ್ಲಿಂದಲೇ ಗೆಲ್ಲಿಸಿ ತರುತ್ತೇವೆ. ಈ ವಿಷಯದಲ್ಲಿ ಕಾಂಗ್ರೆಸ್‌ಗೆ ಪಾಠ ಕಲಿಸ್ತಾರೆ. ಜೆಡಿಎಸ್ ಕಿಂಗ್ ಮೇಕರ್ ಅಲ್ಲ. ಕಿಂಗ್ ಆಗುತ್ತೆ. ಕುಮಾರಣ್ಣ ಕಿಂಗ್ ಎಂದರು.

Edited By

Shruthi G

Reported By

Shruthi G

Comments