ಅಜ್ಜಿಯ ಆಶೀರ್ವಾದವಿಲ್ಲದೆ ನಡೀತು ವಿರಾಟ್-ಅನುಷ್ಕಾ ಮದುವೆ

21 Dec 2017 1:10 PM | General
281 Report

ವಿರಾಟ್-ಅನುಷ್ಕಾ ಮದುವೆಯಲ್ಲಿ ಕೆಲವೇ ಕೆಲವು ಮಂದಿಗೆ ಆಹ್ವಾನ ನೀಡಲಾಗಿತ್ತು. ಬೆರಳೆಣಿಕೆಯಷ್ಟು ಮಂದಿ ಮಾತ್ರ ಮದುವೆ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಆದ್ರೆ ವಿರಾಟ್-ಅನುಷ್ಕಾ ಮದುವೆ ಕಣ್ತುಂಬಿಕೊಳ್ಳಲು ಕಾಯ್ತಿದ್ದ ಅನೇಕರಲ್ಲಿ ಅನುಷ್ಕಾ ಅಜ್ಜಿ ಕೂಡ ಒಬ್ಬರು.

ಮದುವೆಗೂ ಮುನ್ನ ಅನುಷ್ಕಾ ಅಜ್ಜಿಗೆ ಯಾವುದೇ ಸುದ್ದಿ, ಕರೆಯೋಲೆ ಹೋಗಿಲ್ಲವಂತೆ. ಪ್ರತಿದಿನ ಫೋನ್ ನಲ್ಲಿ ಮಾತನಾಡುತ್ತಿದ್ದರೂ ಮದುವೆ ವಿಷ್ಯವನ್ನು ಯಾರೂ ಹೇಳಿಲ್ಲವಂತೆ. ಡೆಹ್ರಾಡೂನ್ ನಲ್ಲಿ ಅನುಷ್ಕಾ ಚಿಕ್ಕಪ್ಪ-ಚಿಕ್ಕಮ್ಮನ ಜೊತೆ ವಾಸವಾಗಿರುವ ಅಜ್ಜಿ ಮೊಮ್ಮಗಳ ಮದುವೆಗೆ ಆಹ್ವಾನ ಬರುತ್ತೆ ಎಂದು ಕಾದಿದ್ದರಂತೆ. ಆದ್ರೆ ಪತ್ರಿಕೆಯಲ್ಲಿ ಬಂದ ಸುದ್ದಿ ನೋಡಿಯೇ ಮದುವೆ ನಡೆದಿದೆ ಎಂಬ ಸಂಗತಿ ಅವರಿಗೆ ಗೊತ್ತಾಯ್ತಂತೆ. ಈ ಬಗ್ಗೆ ಅಜ್ಜಿ ಅಧಿಕೃತವಾಗಿ ತನ್ನ ನೋವನ್ನು ತೋಡಿಕೊಂಡಿಲ್ಲ. ಆದ್ರೆ ನೋವಿನಲ್ಲಿಯೇ ಮೊಮ್ಮಗಳಿಗೆ ಆಶೀರ್ವಾದ ನೀಡಿದ್ದಾರೆ.

Edited By

Shruthi G

Reported By

Madhu shree

Comments