ಕ್ರಿಸ್​​ಮಸ್ ಆಚರಿಸುವವರೇ ಜವಾಬ್ದಾರಿ ಹೊರಿ: ಹಿಂದೂ ಜಾಗರಣ ಮಂಚ್

20 Dec 2017 12:02 PM | General
265 Report

ಅಲಿಘರ್: ಉತ್ತರಪ್ರದೇಶದ ಅಲಿಘಡದಲ್ಲಿ ಕ್ರಿಸ್​​ಮಸ್​​ಗೆ ಆಚರಣೆಗೆ ಅವಕಾಶ ಕೊಡಬಾರದು ಎಂದು ಹಿಂದೂ ಜಾಗರಣ್ ಮಂಚ್ ಸದಸ್ಯರು ಶಾಲೆಗಳಿಗೆ ಪತ್ರ ಬರೆದಿದ್ದಾರೆ. ಕ್ರಿಸ್​​ಮಸ್​ ಆಚರಿಸುವವರು ಅವರೇ ಹೊಣೆ ಹೊರಬೇಕು ಎಂದು ಬೆದರಿಕೆಯ ಮಾದರಿಯಲ್ಲಿ ಹಿಂದೂ ಜಾಗರಣ ಮಂಚ್ ಸದಸ್ಯರು ಎಚ್ಚರಿಕೆ ನೀಡಿದ್ದಾರೆ.

ಒಂದು ವೇಳೆ ಕ್ರಿಸ್​​ಮಸ್ ಆಚರಿಸಿದಲ್ಲಿ, ಮುಂದೆ ಕ್ರಮ ಕೈಗೊಳ್ಳುವುದಾಗಿ ಬೆದರಿಕೆ ಹಾಕಿರುವ ಆರೋಪ ಕೂಡ ಎದುರಾಗಿದೆ. ಈ ಸಂಬಂಧ ಶಾಲೆಯ ಆಡಳಿತ ಮಂಡಳಿಗಳಿಗೆ ಪತ್ರವನ್ನು ನೀಡಲಾಗಿದೆ. ಈ ಕುರಿತು ಶಾಲೆಗಳಿಗೆ ತಾಕೀತು ಮಾಡಿರುವ ಹಿಂದೂ ಮುಖಂಡರು, ಡಿಸೆಂಬರ್ 25ರಂದು ನಡೆಯಲಿರುವ ಕ್ರಿಸ್​​ಮಸ್ ಆಚರಣೆಗೆ ವಿರೋಧ ವ್ಯಕ್ತಪಡಿಸಿದ್ದಾರೆ.

ಈ ಘಟನೆಯಿಂದ ಯೋಗಿ ಸಿಎಂ ಆದಿತ್ಯನಾಥ್ ನಾಡಿನಲ್ಲಿ ಗೂಂಡಾಗಿರಿ ನಡೆಯುತ್ತಿರುವುದು ಸಾಬೀತಾಗಿದ್ದು, ನೈತಿಕ ಪೊಲೀಸ್​​ಗಿರಿ ಕೂಡ ಜಾರಿಯಲ್ಲಿರುವುದು ಸ್ಪಷ್ಟವಾದಂತಾಗಿದೆ. ಆದರೆ, ಸರ್ಕಾರ ಮತ್ತು ಅಧಿಕಾರಿಗಳು ಇದುವರೆಗೆ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ. ಈ ಕುರಿತು ಪ್ರತಿಕ್ರಿಯಿಸಿರುವ ವಿಪಕ್ಷಗಳು, ಯಾವ ಕ್ರಮ ಕೈಗೊಳ್ಳುತ್ತಾರೆ? ಎಂದು ಪ್ರಶ್ನಿಸಿವೆ. ಬಿಜೆಪಿ ಇಂಥ ಕ್ರಮಗಳನ್ನು ಬೆಂಬಲಿಸುವುದಿಲ್ಲ ಎಂದಿದೆ. ಅಲ್ಲದೇ, ಶಾಲೆಗಳು ಈ ಕುರಿತು ದೂರು ನೀಡಲಿ ಎನ್ನುವ ಮೂಲಕ ಕ್ರಮ ಕೈಗೊಳ್ಳಲು ಸರ್ಕಾರ ಮೀನಮೇಷ ಎಣಿಸುತ್ತಿರುವ ಸಂಗತಿ ಬಹಿರಂಗವಾಗಿದೆ.

ಮಾಧ್ಯಮಗಳಲ್ಲಿ ಈ ಕುರಿತು ವರದಿಯಾದ ಬಳಿಕ ಎಚ್ಚೆತ್ತ ಪೊಲೀಸರು ಪತ್ರ ಹಂಚಿದವರ ವಿರುದ್ಧ ಕ್ರಮಕ್ಕೆ ಮುಂದಾಗಿದ್ದಾರೆ ಎಂದು ವರದಿಯಾಗಿದೆ.

Courtesy: Dailyhunt

Comments