ಮಹದಾಯಿ ವಿವಾದ: ಕೋರ್ಟ್ ಗೆ ಮಹತ್ವದ ದಾಖಲೆ ಸಲ್ಲಿಸಲು ರಾಜ್ಯ ಸಜ್ಜು

20 Dec 2017 11:53 AM | General
382 Report

ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಮಹದಾಯಿ ವಿಚಾರವಾಗಿ ಲಾಭ ನಷ್ಟದ ಲೆಕ್ಕಾಚಾರ ನಡೆಯುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಕಳಸಾ-ಬಂಡೂರಿ ಯೋಜನೆಗೆ ಸಂಬಂಧಿಸಿದಂತೆ ಕೇಂದ್ರ ಪರಿಸರ ಇಲಾಖೆ 2003ರ ಆ.28 ರಂದು ನೀಡಿದ್ದ ಅನುಮತಿ ಪತ್ರದ ದಾಖಲೆಯನ್ನು 2018 ರ ಫೆ.6 ರಂದು ನಡೆಯುವ ವಿಚಾರಣೆ ವೇಳೆ ಹಾಜರು ಪಡಿಸಲು ನಿರ್ಧರಿಸಿದೆ.

ರಾಜ್ಯ ಸರ್ಕಾರಕ್ಕೆ ಗೋವಾ ವಿರುದ್ದ ವಾದ ಮಂಡಿಸಲು ಈ ದಾಖಲೆ ಪ್ರಬಲ ಅಸ್ತ್ರ ಎಂದೇ ಪರಿಗಣಿಸಲಾಗಿದೆ. ಮಂಗಖವಾರ ಸಭೆ ನಡೆಸಿದ ಹಿರಿಯ ಅಧಿಕಾರಿಗಳ ಕೇಂದ್ರದ ಅನುಮತಿ ಪತ್ರದ ಬಗ್ಗೆ ಚರ್ಚಿಸಿದ್ದು ವಿಚಾರಣೆಯಲ್ಲಿ ಇದೇ ದಾಖಲೆ ಪ್ರಮುಖವಾಗಿಸಿ ವಾದ ಮಂಡಿಸುವಂತೆ ರಾಜ್ಯದ ಪರ ವಕೀಲ ಮೋಹನ್ ಕಾತರಕಿಗೆ ತಿಳಿಸಲು ತೀರ್ಮಾನಿಸಿದೆ.ಅಚ್ಚರಿ ಎಂದರೆ 2003ರಲ್ಲೇ ಯೋಜನೆಗೆ ಅನುಮತಿ ದೊರೆತರೂ ಜಲಸಂಪನ್ಮೂಲ ಇಲಾಖೆಯಲ್ಲಿ ಈ ಬಗ್ಗೆ ದಾಖಲೆ ಇರಲಿಲ್ಲ. ಗ್ರಾಮೀಣಾಭಿವೃದ್ಧಿ ಸಚಿವ ಎಚ್.ಕೆ. ಪಾಟೀಲ್ ಅನುಮತಿ ಪತ್ರ ಪಡೆದುಕೊಂಡಿರು ಬಗ್ಗೆ ಪ್ರಸ್ತಾಪಿಸಿದ್ದರೂ, ಸರ್ಕಾರದ ಬಳಿ ದಾಖಲೆ ಇರದ ಕಾರಣ ಪರಿಸರಕ್ಕೆ ಹಾನಿಯಾಗುತ್ತದೆ ಎಂದೇ ಗೋವಾ ಖ್ಯಾತೆ ತೆಗೆದಿತ್ತು.

ಸುಪ್ರೀಂಕೋರ್ಟ್ ಸಹ ಇದೇ ವಾದ ಮಂಡಿಸಿತ್ತು. ಅಂತಿಮವಾಗಿ ಸಚಿವ ಎಚ್.ಕೆ. ಪಾಟೀಲ್ ವಿಶೇಷ ಕರ್ತವ್ಯಾಧಿಕಾರಿ ಲಕ್ಷ್ಮೀಕಾಂತ ಜೋಷಿ ಆರ್ ಟಿ ಐ ಮೂಲಕ ದಾಖಲೆ ಪಡೆದಿದ್ದಾರೆ.ಡಿ.22ರಂದು ಬಿಜೆಪಿ ಸಭೆ: ಡಿ.21ರಂದು ಹುಬ್ಬಳ್ಳಿಯಲ್ಲಿ ನಡೆಯಲಿರುವ ಪರಿವರ್ತನಾ ಯಾತ್ರೆಯಲ್ಲಿ ಮಹದಾಯಿ ವಿವಾದ ಪರಿಹಾರ ಸೂತ್ರ ಘೋಷಿಸುವ ಹಿನ್ನೆಲೆಯಲ್ಲಿ ಬುಧವಾರ ನಡೆಯಬೇಕಿದ್ದ ಪರಿವರ್ತನಾ ಯಾತ್ರೆ ಡಿ.೨೨ಕ್ಕೆ ಮುಂದೂಡಲಾಗಿದೆ. ಗೋವಾ ಸಿಎಂ ಹಾಗೂ ಬಿಜೆಪಿ ವರಿಷ್ಠರ ಜತೆಗೆ ಸಭೆ ನಡೆಸಲು ರಾಜ್ಯ ನಾಯಕರು ತೀರ್ಮಾನಿಸಿದ್ದಾರೆ. ಗುರುವಾರ ಮಹತ್ವದ ಸಭೆ ಸಾಧ್ಯತೆ ಇದೆ.

Edited By

Shruthi G

Reported By

Shruthi G

Comments