ಸಿಮ್ ಮೇಲೆ ಬರೆದಿರುವ ನಂಬರ್‌ಗಳ ಆಚ್ಚರಿ ವಿಷಯಗಳು ಏನು ಗೊತ್ತಾ?

20 Dec 2017 11:35 AM | General
390 Report

ನೀವು ಖರೀದಿಸುವ ಸಿಮ್‌ ಕಾರ್ಡ್‌ ಮೇಲೆ ಕೆಲವು ಸಂಖ್ಯೆಗಳು ಬರೆದಿರುವುದನ್ನು ನೀವು ಕಾಣಬಹುದು. ಆದರೆ ಅದು ಯಾವ ನಂಬರ್‌ಗಳು, ಅದನ್ನು ಯಾಕೆ ಬರೆದಿರುತ್ತಾರೆ ಎನ್ನುವುದನ್ನು ತಿಳಿಸುವ ಪ್ರಯತ್ನ ಇದಾಗಿದೆ. ನಿಮ್ಮ ಸಿಮ್‌ಕಾರ್ಟ್‌ಮೇಲೆ ಒಟ್ಟು 19 ಅಂಕಿಗಳನ್ನು ಬರೆದಿರಲಾಗುತ್ತದೆ.

ಈ 19 ನಂಬರ್‌ಗಳಲ್ಲಿ ನಿಮ್ಮ ಸಿಮ್‌ ಕಾರ್ಡ್‌ ಕುರಿತ ಸಂಪೂರ್ಣ ಮಾಹಿತಿಯನ್ನು ನೀಡಲಾಗಿರುತ್ತದೆ. ಇದರಲ್ಲಿ ನಿಮ್ಮ ಮೊಬೈಲ್‌ ನಂಬರ್‌ನಿಂದ ಹಿಡಿದು ಟೆಲಿಕಾಮ್‌ ಆಪರೇಟರ್‌‌ವರೆಗೆ ಎಲ್ಲಾ ಪ್ರಮುಖ ಮಾಹಿತಿಗಳು ಒಳಗೊಂಡಿರುತ್ತದೆ. ಅಲ್ಲದೇ ಅದರಲ್ಲಿರುವ ಇಂಗ್ಲೀಷ್ ಅಕ್ಷರವೂ ನಿಮ್ಮ ನೆಟ್‌ವರ್ಕ್ ಬಗ್ಗೆ ತಿಳಿಸುತ್ತದೆ.ನಿಮ್ಮ ಸಿಮ್‌ ಕಾರ್ಡ್‌ ಮೇಲೆ ಇಂಗ್ಲೀಷ್ ಅಕ್ಷರವೂ ನಿಮ್ಮ ಸಿಮ್ ನೆಟ್‌ವರ್ಕ್‌ ಬಗ್ಗೆ ಮಾಹಿತಿಯನ್ನು ನೀಡುತ್ತದೆ. U ಎಂದು ಬರೆದಿದ್ದರೆ ಅದು ಎಲ್ಲಾ ನೆಟ್‌‌ವರ್ಕ್‌ನಲ್ಲಿ ಕೆಲಸ ಮಾಡುತ್ತದೆ. ಅಂದರೆ ಇದು 2ಜಿ ಯಿಂದ 4ಜಿ ವರೆಗೂ H ಎಂದು ಬರೆದಿದ್ದರೇ ಕೆಲವೇ ಕೆಲವು ನೆಟ್‌ವರ್ಕ್‌ನಲ್ಲಿ ಮಾತ್ರವೇ ಬಳಕೆಯಾಗಲಿದೆ ಎಂದು ಅರ್ಥ.

ನಿಮ್ಮ ಸಿಮ್‌ ಕಾರ್ಡ್‌ ಮೇಲೆ ಇರುವ ಮೊದ; 2 ಅಂಕಿಗಳು ಇಂಡಸ್ಟ್ರಿಯ ಕೋಡ್‌ ಆಗಿರಲಿದ್ದು, ಇಂಟರ್‌‌ನ್ಯಾಷನಲ್‌ ಯೂನಿಯನ್‌ ನೀಡಲಿದೆ.ನಿಮ್ಮ ಸಿಮ್ ಯಾವ ದೇಶದ್ದು ಎಂದು ಗುರುತಿಸಲು ನಂತರದ ಎರಡು ಸಂಖ್ಯೆಗಳು ಸಹಾಯ ಮಾಡುತ್ತದೆ. ಸದ್ಯ ಭಾರತದ್ದು 91 ಆಗಿದ್ದು, ಇವುಗಳನ್ನು ಮೊಬೈಲ್‌ ಕಂಟ್ರಿ ಕೋಡ್‌‌ ಎಂದು ಕರೆಯಲಾಗುತ್ತದೆ. ಇದು ದೇಶದಿಂದ ದೇಶಕ್ಕೆ ಬದಲಾಗುತ್ತಿದೆ.ಇದಾದ ಮೇಲೆ ಕಾಣುವ 12 ಅಂಕಿಗಳನ್ನು ಸಿಮ್ ನಂಬರ್‌ ಗಳಾಗಿದ್ದು, ಈ ನಂಬರ್‌ನಿಂದ ನೀವು ಮೊಬೈಲ್‌ ನಂಬರ್‌ನ ಅನ್ನು ಗುರುತಿಸಬಹುದಾಗಿದೆ. ನಿಮ್ಮ ಮೊಬೈಲ್ ನಂಬರ್ ಮರೆತರೆ ಹುಡುಕುವುದು ಸುಲಭ.

 

Edited By

Shruthi G

Reported By

Shruthi G

Comments

Cancel
Done