ಉದ್ಘಾಟನೆಯಾದ ದಿನವೇ ಹಳಿ ತಪ್ಪಿದ ಹೊಸ ರೈಲು

19 Dec 2017 11:27 AM | General
322 Report

ಅಮೆರಿಕದ ವಾಷಿಂಗ್ಟನ್ ನಲ್ಲಿ ಉದ್ಘಾಟನೆಯಾದ ದಿನವೇ ಹೊಸ ರೈಲು ಹಳಿ ತಪ್ಪಿದೆ. ಈ ದುರ್ಘಟನೆಯಲ್ಲಿ ಮೂವರು ಸಾವನ್ನಪ್ಪಿದ್ದಾರೆ. Amtrack ರೈಲು ನಿನ್ನೆಯಷ್ಟೆ ಉದ್ಘಾಟನೆಗೊಂಡಿತ್ತು. ಸಿಯಾಟಲ್ ನಿಂದ ಪೋರ್ಟ್ ಲ್ಯಾಂಡ್ ಮಾರ್ಗದಲ್ಲಿ ಮೊಟ್ಟ ಮೊದಲ ಬಾರಿಗೆ ಸಂಚರಿಸುತ್ತಿತ್ತು.

ಈ ವೇಳೆ ರೈಲು ಹಳಿ ತಪ್ಪಿದೆ. ಅಪಘಾತದಲ್ಲಿ ಮೂವರು ಮೃತಪಟ್ಟಿದ್ದು, 100ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ರೈಲಿನಲ್ಲಿ ಅಧಿಕಾರಿಗಳು ಹಾಗೂ 77 ಪ್ರಯಾಣಿಕರಿದ್ದರು. ಒಂದು ಲಾರಿ ಸೇರಿದಂತೆ ಒಟ್ಟು 6 ವಾಹನಗಳು ಅಪಘಾತದಲ್ಲಿ ಜಖಂಗೊಂಡಿವೆ. ಬೆಳಗ್ಗೆ 7.34ರ ಸುಮಾರಿಗೆ ರೈಲು ಅಪಘಾತ ಸಂಭವಿಸಿದೆ. ಹಳಿ ತಪ್ಪಿದ ರೈಲು ಸೇತುವೆಯಿಂದ ಕೆಳಗೆ ನೇತಾಡುತ್ತಿತ್ತು. ಹಳಿಗಳ ಮೇಲಿದ್ದ ಲೋಹ ತಿರುಚಿದ್ದರಿಂದ ಈ ಅವಘಡ ಸಂಭವಿಸಿದೆ ಅಂತಾ ಅಧಿಕಾರಿಗಳು ತಿಳಿಸಿದ್ದಾರೆ.

Edited By

Hema Latha

Reported By

Madhu shree

Comments