ತಂದೆಗೆ ಹುಟ್ಟುಹಬ್ಬದ ಉಡುಗೊರೆ ಕೊಟ್ಟ ನಿಖಿಲ್‌

16 Dec 2017 4:58 PM | General
2000 Report

ಚಾಲೆಂಜಿಂಗ್ ಸ್ಟಾರ್ ದರ್ಶನ ಅಭಿನಯದ ಕುರುಕ್ಷೇತ್ರ ಚಿತ್ರದ ಅಭಿಮನ್ಯು ಪಾತ್ರವನ್ನೊಳಗೊಂಡ ಮೊದಲ ಟೀಸರ್ ಇಂದು ಬಿಡುಗಡೆಯಾಗಿದೆ.

ಕುರುಕ್ಷೇತ್ರ ಚಿತ್ರದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಅವರ ಪುತ್ರ ನಟ ನಿಖಿಲ್ ಗೌಡ ಅಭಿಮನ್ಯು ಪಾತ್ರ ನಿಭಾಯಿಸುತ್ತಿದ್ದಾರೆ. ಇಂದು ಕುಮಾರಸ್ವಾಮಿ ಹುಟ್ಟು ಹಬ್ಬದ ಹಿನ್ನೆಲೆ ಟೀಸರ್ ರಿಲೀಸ್ ಮಾಡುವ ಮೂಲಕ ತಂದೆಗೆ ಉಡುಗೊರೆ ನೀಡಿದ್ದಾರೆ ನಿಖಿಲ್. ಮಧ್ಯಾಹ್ನ 2 ಗಂಟೆಗೆ ಟೀಸರ್‌ ಬಿಡುಗಡೆಯಾಗಿದೆ.ಕಳೆದ ಹಲವು ತಿಂಗಳಿಂದ `ಕುರುಕ್ಷೇತ್ರ' ಚಿತ್ರದ ಚಿತ್ರೀಕರಣ ನಡೆಯುತ್ತಿದೆ.

ಈಗಾಗಲೇ ದರ್ಶನ್ ಮತ್ತು ಹರಿಪ್ರಿಯಾ ಅಭಿನಯದ ಒಂದು ಹಾಡು ಸೇರಿದಂತೆ, ಹಲವು ಮಹತ್ವದ ದೃಶ್ಯಗಳನ್ನು ಚಿತ್ರೀಕರಿಸಿಕೊಳ್ಳಲಾಗಿದೆ. ಕುರುಕ್ಷೇತ್ರ ಚಿತ್ರದಲ್ಲಿ ದರ್ಶನ್ ಜೊತೆಗೆ ಅಂಬರೀಶ್, ರವಿಚಂದ್ರನ್, ಅರ್ಜುನ್ ಸರ್ಜಾ, ನಿಖಿಲ್ ಕುಮಾರ್, ರವಿಶಂಕರ್, ಸಾಯಿಕುಮಾರ್, ಶ್ರೀನಾಥ್, ಜಿ.ಕೆ. ಶ್ರೀನಿವಾಸಮೂರ್ತಿ, ಲಕ್ಷ್ಮೀ, ಸ್ನೇಹ, ಹರಿಪ್ರಿಯಾ, ಅದಿತಿ ಆರ್ಯ ಸೇರಿದಂತೆ ಹಲವರು ನಟಿಸುತ್ತಿದ್ದಾರೆ. ಚಿತ್ರಕ್ಕೆ ಜಯನ್ ವಿನ್ಸೆಂಟ್ ಛಾಯಾಗ್ರಹಣ, ವಿ. ಹರಿಕೃಷ್ಣ ಸಂಗೀತವಿದೆ.

Edited By

Shruthi G

Reported By

Shruthi G

Comments