ಪತ್ರಕರ್ತ 'ಪದ್ಮರಾಜ' ಸೇರಿದಂತೆ 14 ಸಾಧಕರಿಗೆ ಪ್ರತಿಷ್ಠಿತ 'ಅವ್ವ' ಪ್ರಶಸ್ತಿ

15 Dec 2017 12:55 PM | General
532 Report

ಹಿರಿಯ ಪತ್ರಕರ್ತ 'ಪದ್ಮರಾಜ ದಂಡಾವತಿ' ಸೇರಿದಂತೆ 14 ಸಾಧಕರಿಗೆ 'ಅವ್ವ' ಪ್ರಶಸ್ತಿಯನ್ನು ಡಿಸೆಂಬರ್ 16ರಂದು ಹುಬ್ಬಳ್ಳಿಯಲ್ಲಿ ಪ್ರದಾನ ಮಾಡಲಾಗುವುದು ಎಂದು ಟ್ರಸ್ಟ್ ನ ಉಪಾಧ್ಯಕ್ಷ, ಶಾಸಕ ಎನ್.ಎಚ್.ಕೋನರಡ್ಡಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಪ್ರಶಸ್ತಿ ವಿಜೇತರ ಹೆಸರು ಇಂತಿದೆ : ಡಾ. ವಿ.ಪಿ.ಐರಸಂಗ, ಸುಜಾತ ಗುರುವ, ಬಿ.ವಿ.ಲಕ್ಷ್ಮೀದೇವಿ,  ಬಿ.ಎಲ್.ಪಾಟೀಲ, ರಾಮಿಗೌಡ, ಅನ್ನಪೂರ್ಣ, ಸೀತಾ ಡಿ.ಛಪ್ಪರ, ಡಿ.ಟಿ.ಪಾಟೀಲ, ಪಂಚಯ್ಯ ಹಿರೇಮಠ, ಶ್ರೀಕಾಂತ ದೇಶಪಾಂಡೆ, ದೇವಪ್ಪ ಮೋರೆ, ಶಾಂತಿಲಾಲ್ ಓಸ್ತವಾಲ, ಪ್ರವೀಣ ಶಿವೇಗೌಡ ಮತ್ತು ಆರ್.ಎಂ.ದರಗದ ಅವರು ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ರೂ 5 ಸಾವಿರ ನಗದು, ಪ್ರಶಸ್ತಿ ಫಲಕ, ಶಾಲನ್ನು ಪ್ರಶಸ್ತಿ ಒಳಗೊಂಡಿದೆ ಎಂದು ಅವರು ತಿಳಿಸಿದರು.

Edited By

Hema Latha

Reported By

Madhu shree

Comments