ಹುತಾತ್ಮರಿಗೆ ಶ್ರದ್ಧಾಂಜಲಿ ಸಲ್ಲಿಸುವ ವೇಳೆ ಮುಖಾಮುಖಿಯಾದ ಪ್ರಧಾನಿ ಮೋದಿ, ಮನಮೋಹನ್ ಸಿಂಗ್

13 Dec 2017 3:13 PM | General
326 Report

ನಿನ್ನೆಯಷ್ಟೇ ಪರಸ್ಪರ ಆರೋಪ-ಪ್ರತ್ಯಾರೋಪ ಮಾಡಿ ಸುದ್ದಿಯಾಗಿದ್ದ ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಇಂದು ಪರಸ್ಪರ ಮುಖಾಮುಖಿಯಾದರು.

2001ರ ಸಂಸತ್ತು ದಾಳಿಯಲ್ಲಿ ತಮ್ಮ ಪ್ರಾಣ ಕಳೆದುಕೊಂಡ ಹುತಾತ್ಮರಿಗೆ ಶ್ರದ್ಧಾಂಜಲಿ ಸಲ್ಲಿಸುವ ಕಾರ್ಯಕ್ರಮದ ವೇಳೆ ಇಬ್ಬರೂ ನಾಯಕರು ಆತ್ಮೀಯವಾಗಿ ಪರಸ್ಪರ ವಂದಿಸಿಕೊಂಡಿದ್ದು ಅಲ್ಲಿ ಸೇರಿದ್ದವರ ಗಮನ ಸೆಳೆಯಿತು.ಸಂಸತ್ತಿಗೆ ದಾಳಿ ನಡೆದು ಇಂದಿಗೆ 16 ವರ್ಷಗಳಾಗಿದ್ದು ಎಲ್ಲಾ ಪಕ್ಷಗಳ ನಾಯಕರು ಗೌರವ ನಮನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಪ್ರಧಾನಿ ಮೋದಿಯವರು ಗುಜರಾತ್ ನ ರ‍್ಯಾಲಿಯಲ್ಲಿ ಮಾತನಾಡುವಾಗ, ಪಾಕಿಸ್ತಾನ ಅಧಿಕಾರಿಗಳು ಮತ್ತು ಮನಮೋಹನ್ ಸಿಂಗ್ ಕಾಂಗ್ರೆಸ್ ನಾಯಕ ಮಣಿಶಂಕರ್ ಅಯ್ಯರ್ ಅವರನ್ನು ಅವರ ಮನೆಯಲ್ಲಿ ಕಳೆದ 6ರಂದು ರಾತ್ರಿಯ ಭೋಜನಕ್ಕೆ ಭೇಟಿಯಾಗಿದ್ದರು ಎಂದರು.ಅದಾಗಿ ಮರುದಿನವೇ ಮಣಿಶಂಕರ್ ಅಯ್ಯರ್ ಪ್ರಧಾನಿಯವರನ್ನು ನೀಚ ಎಂದು ಕರೆದು ಪಕ್ಷದಿಂದ ಅಮಾನತುಗೊಂಡಿದ್ದರು.ಪ್ರಧಾನಿಯವರ ಆರೋಪಕ್ಕೆ ನಿನ್ನೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದ ಮನಮೋಹನ್ ಸಿಂಗ್, ಪ್ರಧಾನಿಯವರು ತಮ್ಮ ದುರಾಲೋಚನೆಯಿಂದ ಕಾನೂನಿನ ವ್ಯಾಪ್ತಿ ಮೀರಿ ಹಿಂದಿನ ನಿದರ್ಶನಗಳಂತೆ ಅಪಾಯಕಾರಿಯಾಗಿ ವರ್ತಿಸುತ್ತಿದ್ದು ದೇಶದ ಜನತೆಯ ಕ್ಷಮೆ ಕೋರಬೇಕೆಂದು ಒತ್ತಾಯಿಸಿದ್ದರು.

 

Edited By

Shruthi G

Reported By

Shruthi G

Comments