ಎಲ್ಲೇ ಕಸದ ರಾಶಿ ಕಂಡರೂ ಮೊಬೈಲ್ ಮೂಲಕ ಸೆರೆ ಹಿಡಿದು ಕಳುಸಿದರೆ ಬಹುಮಾನ

06 Dec 2017 1:48 PM | General
271 Report

ಸಾರ್ವಜನಿಕ ಸ್ಥಳಗಳಲ್ಲಿ ಎಲ್ಲೇ ಕಸದ ರಾಶಿ ಕಂಡರೂ ಸಾರ್ವಜನಿಕರು ಅದರ ಚಿತ್ರವನ್ನು ಮೊಬೈಲ್ ಮೂಲಕ ಸೆರೆ ಹಿಡಿದು ಕಳುಸಿದರೆ ಬಹುಮಾನ ನೀಡಲು ಮುಂದಾಗಿದೆ. ಮೈಸೂರು ಪಾಲಿಕೆ ಅಭಿವೃದ್ಧಿಪಡಿಸಲು ಅಂತರ್ಜಾಲದಿಂದ ಮೊಬೈಲ್‍ನಲ್ಲಿ ಆಪ್ ಡೌನ್‍ಲೋಡ್ ಮಾಡಿಕೊಳ್ಳಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಎಲ್ಲೇ ಕಸದ ರಾಶಿ ಕಂಡರೂ ಸಾರ್ವಜನಿಕರು ಅದರ ಚಿತ್ರವನ್ನು ಮೊಬೈಲ್ ಮೂಲಕ ಸೆರೆ ಹಿಡಿದು ಆಪ್ ಮೂಲಕ ಕಳುಹಿಸಬೇಕು.

ಈ ರೀತಿ ಯಾರು ಹೆಚ್ಚು ಚಿತ್ರಗಳನ್ನು ಕಳುಹಿಸುತ್ತಾರೊ ಅವರಿಗೆ ಹತ್ತು ಸಾವಿರ ರೂ. ಬಹುಮಾನ ನೀಡಲಾಗುವುದು ಎಂದು ಮಹಾನಗರ ಪಾಲಿಕೆ ತೀರ್ಮಾನಿಸಿದೆ. ನಗರದ ಸ್ವಚ್ಚತೆ ವಿಚಾರದಲ್ಲಿ ಆಪ್ ಬಳಕೆಗೆ ಸಾರ್ವಜನಿಕರನ್ನು ಉತ್ತೇಜಿಸುವ ನಿಟ್ಟಿನಲ್ಲಿ ಪಾಲಿಕೆ ಆಯುಕ್ತರು ಬಹುಮಾನ ನೀಡುವುದಾಗಿ ತಿಳಿಸಿದ್ದಾರೆ.  ಹಾಗೆಯೇ ಶಾಲಾಕಾಲೇಜುಗಳಲ್ಲಿ ನಡೆಯುವ ನಗರಸ್ವಚ್ಚತೆ ರಸಪ್ರಶ್ನೆ ಕಾರ್ಯಕ್ರಮದಲ್ಲಿ ವಿಜೇತರಾದವರಿಗೂ ಕೂಡ ಬಹುಮಾನ ನೀಡಲಾಗುವುದು. ಹಾಗೆಯೇ ಸ್ವಚ್ಚತಾ ಕಾರ್ಯಕ್ಕೆ ಹೆಚ್ಚು ಫೀಡ್‍ಬ್ಯಾಕ್ ನೀಡುವವರೆಗೂ ಬಹುಮಾನ ಹಾಗೂ ಸ್ವಚ್ಚತಾ ಆಪ್‍ನ್ನು ಹೆಚ್ಚು ಬಳಕೆ ಮಾಡುವವರಿಗೂ ಬಹುಮಾನ ನೀಡಲು ಪಾಲಿಕೆ ತೀರ್ಮಾನಿಸಿದೆ.

Edited By

Hema Latha

Reported By

Madhu shree

Comments