ಬಾಲಿವುಡ್ ಹಿರಿಯ ನಟ ಶಶಿಕಪೂರ್ ಇನ್ನಿಲ್ಲ

04 Dec 2017 6:23 PM | General
339 Report

ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಬಾಲಿವುಡ್ ಹಿರಿಯ ನಟ ಶಶಿಕಪೂರ್ (79)ಇಂದು ನಿಧನರಾದರು. 2011ರಲ್ಲಿ 'ಪದ್ಮಭೂಷಣ' ಪ್ರಶಸ್ತಿಗೆ ಭಾಜನರಾಗಿದ್ದ 'ಶಶಿಕಪೂರ್' ಮುಂಬೈನ ಕೋಕಿಲಾಬೆನ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.

78 ವರ್ಷ ಪ್ರಾಯದ ಶಶಿ ಕಪೂರ್ ಅನಾರೋಗ್ಯದಿಂದ ಬಳಲುತ್ತಿದ್ದು ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿಂದು ಕೊನೆಯುಸಿರೆಳೆದಿದ್ದಾರೆ. ಕೋಲ್ಕತ್ತಾದಲ್ಲಿ ಜನಿಸಿದ್ದ ಶಶಿ ಕಪೂರ್ 70-80 ದಶಕದಲ್ಲಿ ಬಾಲಿವುಡ್ ನ ಸಾಮ್ರಾಟನಾಗಿ ಮೆರೆದಿದ್ದರು. 2014ರಲ್ಲಿ 'ದಾದಾ ಸಾಹೇಬ್ ಫಾಲ್ಕೆ' ಪ್ರಶಸ್ತಿಗೂ ಭಾಜನರಾಗಿದ್ದರು.

Edited By

Hema Latha

Reported By

Madhu shree

Comments