ಶೀಘ್ರದಲ್ಲೇ ಡಿಕೆಶಿ ಕಳ್ಳಾಟ ಬಹಿರಂಗಪಡಿಸುತ್ತೇನೆ : ಡಿ.ಎಂ.ವಿಶ್ವನಾಥ್

01 Dec 2017 2:10 PM | General
452 Report

ಭ್ರಷ್ಟಾಚಾರ ಆರೋಪ ಹೊತ್ತಿರುವ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಅವರ ಕಳ್ಳಾಟ ಮತ್ತು ಮತದಾರರಿಗೆ ಮಾಡುತ್ತಿರುವ ವಂಚನೆಗಳನ್ನು ಶೀಘ್ರದಲ್ಲೇ ಜನರ ಮುಂದೆ ಬಹಿರಂಗಪಡಿಸುವುದಾಗಿ ರಾಜ್ಯ ಜೆಡಿಎಸ್ ಪ್ರಧಾನಕಾರ್ಯದರ್ಶಿ ಹಾಗೂ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಡಿ.ಎಂ.ವಿಶ್ವನಾಥ್ ಹೇಳಿದರು.

ಪಟ್ಟಣದ ಜೆಡಿಎಸ್ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ವಿವಿಧ ಪಕ್ಷಗಳ ಕಾರ್ಯಕರ್ತರ ಜೆಡಿಎಸ್ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕ್ಷೇತ್ರದಲ್ಲಿ ಸಾವಿರಾರು ಮಂದಿಯ ನಕಲಿ ಮತದಾರರನ್ನು ನೋಂದಾವಣೆ ಮಾಡಿದ್ದಾರೆ. ಇದರಿಂದ ನೈಜ ಮತದಾರರಿಗೆ ತೊಂದರೆ ಮತ್ತು ಕಿರಿಕಿರಿ ಉಂಟಾಗುತ್ತಿದೆ ಮುಂದಿನ ದಿನಗಳಲ್ಲಿ ಚುನಾವಣಾಧಿಕಾರಿಗಳ ಜತೆ ಚರ್ಚಿಸಿ ನಕಲಿ ಮತದಾರರನ್ನು ತೆಗೆಸಿ ಹಾಕಲಾಗುವುದು ಎಂದು ತಿಳಿಸಿದರು. ಬಿಡಿಸಿಸಿ ಬ್ಯಾಂಕು ಮಾಜಿ ಅಧ್ಯಕ್ಷ ನಾರಾಯಣಗೌಡ, ಮಾಜಿ ಶಾಸಕ ಕಾಡಹಳ್ಳಿ ಶಿವಲಿಂಗೇಗೌಡ, ಜೆಡಿಎಸ್ ತಾಲೂಕು ಅಧ್ಯಕ್ಷ ಬಿ.ನಾಗರಾಜು, ಮುಖಂಡರಾದ ಪುಟ್ಟರಾಜು, ತುಂಗಣಿ ಪುಟ್ಟಸ್ವಾಮಿ, ಸಿದ್ದಮರೀಗೌಡ, ಚಿನ್ನಸ್ವಾಮಿ ಮತ್ತಿತರರಿದ್ದರು.ಬೆಂಕಿಶ್ರೀಧರ್ ಸೇರಿದಂತೆ ನೂರಾರು ಕಾರ್ಯಕರ್ತರು ಇದೇ ವೇಳೆ ಜೆಡಿಎಸ್ ಪಕ್ಷ ಸೇರ್ಪಡೆಗೊಂಡರು.

ಕಳೆದ 25 ವರ್ಷಗಳ ಹಿಂದೆ ಸಣ್ಣ ಮೋಟಾರ್‍ಸೈಕಲ್‍ನಲ್ಲಿ ಓಡಾಡುತ್ತಾ ಜಿಲ್ಲಾ ಪಂಚಾಯತಿ ಸದಸ್ಯರಾಗಿದ್ದ ಡಿ.ಕೆ.ಶಿವಕುಮಾರ್ ಇಂದು ಸಾವಿರಾರು ಕೋಟಿ ರೂ. ಆಸ್ತಿ ಒಡೆಯ ಹೇಗಾಗಿದ್ದಾರೆ? ಇವರಿಗೆ ಇದೆಲ್ಲಾ ಎಲ್ಲಿಂದ ಬಂತು? ಹೇಗೆ ಬಂತು? ಎಂಬುದನ್ನು ಸಾರ್ವಜನಿಕರಿಗೆ ಮನವರಿಕೆ ಮಾಡಿಕೊಡಲು ನಾನು ಸಿದ್ಧನಿದ್ದೇನೆ ಎಂದರು.ಅಕ್ರಮ ಗಣಿಗಾರಿಕೆ, ಮರಳು ಲೂಟಿ, ಪರಿಸರ ಸಂಪತ್ತಿನ ನಾಶ ಸೇರಿದಂತೆ ಡಿ ನೋಟಿಫಿಕೇಷನ್ ಪ್ರಕರಣಗಳು ಸುಪ್ರಿಂಕೋರ್ಟ್‍ವರೆಗೂ ದಾಖಲಾಗಿ ತನಿಖೆ ಹಂತದಲ್ಲಿದ್ದರೂ ಅವುಗಳನ್ನು ಮರೆಮಾಚಿ ಬಹುದೊಡ್ಡ ಅಭಿವೃದ್ಧಿಯ ಹರಿಕಾರರು ಎಂದು ಬಿಂಬಿಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು. ಕ್ಷೇತ್ರವನ್ನು ಅಭಿವೃದ್ಧಿಪಡಿಸುತ್ತೇನೆಂದು ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ನೂರಾರು ಕೋಟಿ ಅನುದಾನದ ಹಣವನ್ನು ಅಭಿವೃದ್ಧಿಯ ನೆಪದಲ್ಲಿ ಬಳಸಿಕೊಂಡು ಅದರಿಂದ ಬರುವ ನೂರಾರು ಕೋಟಿ ಕಮೀಷನ್ ಹಣವನ್ನು ಲೂಟಿಮಾಡಿದ್ದಾರೆ. ಇವುಗಳ ಬಗ್ಗೆ ನಮ್ಮಲ್ಲಿ ಸಾಕ್ಷ್ಯಾಧಾರಗಳಿವೆ ಎಂದರು.

 

Edited By

Hema Latha

Reported By

Shruthi G

Comments