ದಢೂತಿ ಮಹಿಳೆಯೊಬ್ಬಳು ಕಂಪನಿಯೊಂದರ ಉಡುಪುಗಳಿಗೆ ಮಾಡೆಲ್

01 Dec 2017 11:06 AM | General
399 Report

ಇಲ್ಲೊಂದು ಕಂಪನಿ ಇಂತಹ ದಢೂತಿ ಮಹಿಳೆಯನ್ನು ತನ್ನ ಕಂಪನಿ ಉಡುಪುಗಳಿಗೆ ಮಾಡೆಲ್/ ರಾಯಭಾರಿಯಾಗಿ ನೇಮಿಸಿಕೊಂಡು, ದೇಹಭಾರ ಇಳಿಸುವ ಜವಾಬ್ದಾರಿಯನ್ನು ಸ್ವತಃ ಕಂಪನಿಯೇ ಹೊತ್ತಿದೆ! ಅಕಾಡೆಮಿ ಸ್ಪೋರ್ಟ್ಸ್ ಅಂಡ್ ಔಟ್​ಡೋರ್ ಕಂಪನಿ ಇನ್​ಸ್ಟಾಗ್ರಾಂ ಫ್ಯಾಷನ್ ಮಾಡೆಲ್, ನ್ಯೂಯಾರ್ಕ್​ನ ಅನ್ನಾ ಒ ಬ್ರೇನ್ ಅವರನ್ನು ‘ಬಿಸಿಜಿ’ ಪಟ್ಟಿಗೆ ರಾಯಭಾರಿಯಾಗಿ ನೇಮಿಸಿತು.

ಅಂದಹಾಗೆ, ಈ ಕಂಪನಿಯು ಮಹಿಳೆಯರಿಗಾಗಿ 3 ಎಕ್ಸ್ ಗಾತ್ರದ ಉಡುಪುಗಳನ್ನು ಸಿದ್ಧಪಡಿಸುತ್ತಿದೆ. ಮೊದಮೊದಲು ಅನ್ನಾ ಸಹ ’ತನ್ನ ಗಾತ್ರದ ಮಹಿಳೆಯರಿಗೆ ಧರಿಸಲು ಮಾರುಕಟ್ಟೆಯಲ್ಲಿ ಉಡುಪುಗಳೇ ಇಲ್ಲ. ಹಾಗಾಗಿ ಸರಿಯಾಗಿ ಎಕ್ಸರ್​ಸೈಜ್ ಮಾಡಲು ಆಗುತ್ತಿಲ್ಲ’ ಎಂದು ಗೊಣಗುತ್ತಿದ್ದರು. ಇದನ್ನು ಕೇಳಿಸಿಕೊಂಡ ಸದರಿ ಕಂಪನಿ ಅನ್ನಾ ಸಹಾಯಕ್ಕೆ ಧಾವಿಸಿದೆ. ಕಂಪನಿಯ ಹೊಸ ಪ್ಲಸ್​ಸೈಜ್ ಉಡುಪು ಧರಿಸಿ, ಇನ್​ಸ್ಟಾಗ್ರಾಂನಲ್ಲಿ ಫೋಟೋಗಳನ್ನು ಹಾಕಿದಾಗ ಅನ್ನಾಗೆ ಲೈಕ್​ಗಳ ಸುರಿಮಳೆಯಾಗಿದೆ. ಜತೆಗೆ ಹಿಂದಿನಂತೆ ಕೊಂಕುನುಡಿಗಳೂ ಕೇಳಿಬಂದಿವೆ. 

Edited By

Hema Latha

Reported By

Madhu shree

Comments