'ಕುಮಾರಪತ್ರ- ಜನಸಾಮಾನ್ಯರಿಗೆ ಇನ್ನೂ ಹತ್ರ' :ಎಚ್ ಡಿಕೆ ಹೊಸ ಯೋಜನೆ

01 Dec 2017 10:01 AM | General
1440 Report

ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಜನರ ಒಲವು ಗಳಿಸುವ ನಿಟ್ಟಿನಲ್ಲಿ ಕರ್ನಾಟಕ ವಿಕಾಸ ವಾಹಿನಿ ಯಾತ್ರೆ ಪ್ರಾರಂಭಿಸಿ ಗ್ರಾಮವಾಸ್ತವ್ಯ ನಡೆಸುತ್ತಿರುವ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಇದೀಗ 'ಕುಮಾರಪತ್ರ- ಜನಸಾಮಾನ್ಯರಿಗೆ ಇನ್ನೂ ಹತ್ರ' ಪತ್ರ ಸಂವಾದಕ್ಕೆ ಮುಂದಾಗಿದ್ದಾರೆ.ರಾಜ್ಯದ ಜನತೆಯ ತಮ್ಮ ಸಮಸ್ಯೆ, ನೋವು-ನಲಿವು, ಸಸಲಹೆ-ಸೂಚನೆ ಪತ್ರದ ಮೂಲಕ ಪಡೆಯುವುದು ಹಾಗೂ ಸಮಸ್ಯೆಗಳಿಗೆ ಸ್ಪಂದಿಸುವುದು ಇದರ ಉದ್ದೇಶ.

ಪತ್ರ ಬರೆಯುವ ಸಂಬಂಧ ಬಹಿರಂಗ ಪ್ರಕಟಣೆ ನೀಡಿರುವ ಅವರು, ನಾನು ರಾಜ್ಯ ಪ್ರವಾಸ ಮಾಡುತ್ತಿರುವ ಸಂದರ್ಭದದಲ್ಲಿ ಹಲವಾರು ಬಾರಿ ಜನರು ತಮ್ಮ ಭಾವನೆಗಳನ್ನು ನನ್ನ ಬಳಿ ಹಂಚಿಕೊಳ್ಳಲು ಪ್ರಯತ್ನ ಪಟ್ಟಿದ್ದನ್ನು ನಾನು ಗಮನಿಸಿದ್ದೇನೆ. ಆದರೆ, ಅತಿಯಾದ ಜನಗಂಗುಳಿ ಹಾಗೂ ನೂಕು ನುಗ್ಗಲಿನಲ್ಲಿ ಸಾಕಷ್ಟು ಜನರಿಗೆ ತಮ್ಮ ನೋವು-ನಲಿವು ನನ್ನ ಬಳಿ ಹಂಚಿಕೊಳ್ಳಲು ಸಾಧ್ಯವಾಗದೆ ನಿರಾಶರಾಗಿ ತೆರಳಿರುವುದನ್ನು ಅಸಹಾಯಕತೆಯಿಂದ ಗಮನಿಸಿದ್ದೇನೆ. ಸಮಾಜದ ಕಟ್ಟ ಕಡೆಯ ವ್ಯಕ್ತಿಯ ಭಾವನೆಗಳಿಗೂ ಸ್ಪಂದಿಸಬೇಕು ಎಂಬ ಹಂಬಲ ನನ್ನಲಿದೆ. ಹಾಗೆಯೇ ರಾಜ್ಯದ ಅಭಿವೃದ್ಧಿಯ ವಿಚಾರವಾಗಿ ನಿಮ್ಮ ದೃಷ್ಟಿಕೋನ ಸಲಹೆ ಸೂಚನೆ ನಮಗೆ ತಿಳಿಯಬೇಕಿದೆ.

ಅದಕ್ಕೆ ನಿಮ್ಮ ಯಾವುದೇ ಸಲಹೆ-ಸೂಚನೆ, ಸಮಸ್ಯೆ ಇದ್ದರೆ ನಾನು ನಿಮ್ಮಲ್ಲಿ ಒಬ್ಬನು ಎಂದು ಭಾವಿಸಿ ಪತ್ರದ ಮುಖಾಂತರ ಹಂಚಿಕೊಳ್ಳಬೇಕು ಎಂದು ಕಳಕಳಿಯ ಮನವಿ ಮಾಡುತ್ತೇನೆ ಎಂದು ತಿಳಿಸಿದ್ದಾರೆ.ಸಾರ್ವಜನಿಕರು ಈ ವಿಳಾಸಕ್ಕೆ ಪತ್ರ ಬರೆಯಬಹುದು. (ಎಚ್‌.ಡಿ.ಕುಮಾರಸ್ವಾಮಿ, ರಂಗ ಎನ್‌ಕ್ಲೇವ್‌ ಅಪಾರ್ಟ್‌ಮೆಂಟ್‌ ನಂ.217, ಸರ್‌.ಸಿ.ವಿ.ರಾಮನ್‌ ರಸ್ತೆ, ಬೆಂಗಳೂರು-560080) ಎಂದು ಮನವಿ ಮಾಡಿದ್ದಾರೆ.

Edited By

Shruthi G

Reported By

Shruthi G

Comments