ಪೇಜಾವರ ಶ್ರೀ ಗಳು ಅನಗತ್ಯ ವಿವಾದವನ್ನು ತನ್ನ ಮೈ ಮೇಲೆ ಎಳೆದುಕೊಂಡಿದ್ದಾರೆ : ದೇವೇಗೌಡ್ರು

28 Nov 2017 9:47 AM | General
340 Report

ಉಡುಪಿಯಲ್ಲಿ ನಡೆದ ಧರ್ಮ ಸಂಸದ್ ಕಾರ್ಯಕ್ರಮದಲ್ಲಿ ಸಂವಿಧಾನ ತಿದ್ದುಪಡಿಯಾಗಬೇಕೆಂಬ ಹೇಳಿಕೆ ನೀಡುವ ಮೂಲಕ ಪೇಜಾವರ ಶ್ರೀ ಅವರು ಅನಗತ್ಯ ವಿವಾದವನ್ನು ತನ್ನ ಮೈ ಮೇಲೆ ಎಳೆದುಕೊಂಡಿದ್ದಾರೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಟೀಕಿಸಿದ್ದಾರೆ.

ಬೆಳ್ಳೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ವಿಷಯ ಪ್ರಸ್ತಾಪಿಸಿ ಮಾತನಾಡಿದ ಅವರು, ರಾಜಕೀಯ ಪ್ರಾತಿನಿಧ್ಯ ಇಲ್ಲದಿದ್ದ ವರ್ಗಗಳಿಗೆ ಸಂವಿಧಾನ ಅವಕಾಶ ನೀಡದಿದ್ದರೆ ಸ್ಥಳೀಯ ಸಂಸ್ಥೆಗಳಲ್ಲಿ ಈ ವರ್ಗಗಳ ಉಪಸ್ಥಿತಿ ಸಾಧ್ಯವಿರಲಿಲ್ಲ ಎಂಬುದರ ಅರಿವು ಪೇಜಾವರರಂತಹ ಹಿರಿಯರಿಗೆ ಇಲ್ಲವೆ ಎಂದು ವಾಗ್ದಾಳಿ ನಡೆಸಿದರು.ದೇಶಕ್ಕೆ ಸಂವಿಧಾನದಿಂದ ಏನೆಲ್ಲಾ ಅನುಕೂಲಗಳು ಆಗಿವೆ ಹಾಗೂ ಆಗುತ್ತಿವೆ ಎಂಬುದು ಮುಖ್ಯವೇ ಹೊರತು ಅದರಲ್ಲಿ ಇಲ್ಲದ ಲೋಪಗಳನ್ನು ತಡಕುವುದು ಪೇಜಾವರರ ಘನತೆಗೆ ತಕ್ಕನಾದ ಹೇಳಿಕೆಯಲ್ಲ ಎಂದು ಅಭಿಪ್ರಾಯಪಟ್ಟರು.ಪೇಜಾವರ ಶ್ರೀ ಅವರು ಎಲ್ಲಾ ಧರ್ಮದವರನ್ನು ಸಮಾನವಾಗಿ ಕಾಣಬೇಕು. ಹಿಂದೆ ಶೂದ್ರರನ್ನು ಹೇಗೆ ನಡೆಸಿಕೊಳ್ಳಲಾಗುತಿತ್ತು? ಅಸ್ಪೃಶ್ಯತೆ ಆಚರಣೆಗೆ ಕಾರಣ ಏನು? ಹಾಗೂ ಜಾತಿ ವ್ಯವಸ್ಥೆ ಇನ್ನೂ ನಮ್ಮಲ್ಲಿ ಮುಂದುವರಿದಿರುವುದಕ್ಕೆ ಕಾರಣವೇನು ಎಂಬುದರ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

Edited By

Shruthi G

Reported By

Shruthi G

Comments