ನಾನೇ ಜಯಲಲಿತಾ ಮಗಳು ಎಂದು ಮಹಿಳೆ ಸಲ್ಲಿಸಿದ ಅರ್ಜಿ ತಿರಸ್ಕರಿಸಿದ ಸುಪ್ರೀಂ

27 Nov 2017 3:55 PM | General
229 Report

ನಾನು ತಮಿಳುನಾಡು ಮಾಜಿ ಮುಖ್ಯಮಂತ್ರಿ ದಿ. ಜೆ. ಜಯಲಲಿತಾ ಅವರ ಮಗಳು. ಇದನ್ನು ಸಾಬೀತುಪಡಿಸಲು ಡಿಎನ್‌ಎ ಪರೀಕ್ಷೆ ನಡೆಸುವಂತೆ ಕೋರಿ ಅಮೃತಾ ಎಂಬ ಮಹಿಳೆ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.

ಬೆಂಗಳೂರು ಮೂಲದ ಅಮೃತಾ ಎಂಬಾಕೆ ತಾನು ಜಯಲಲಿತಾ ಅವರು ಮಗಳು ಎಂದು ಹೇಳಿಕೊಂಡಿದ್ದರು. ಜಯ ಅವರು ಐಯ್ಯಂಗಾರಿ ಬ್ರಾಹ್ಮಣರಾಗಿದ್ದು ಅವರ ಅಂತ್ಯಕ್ರಿಯೆಯನ್ನು ಹಿಂದೂ ಸಂಪ್ರದಾಯದಂತೆ ನೆರೆವೇರಿಸಬೇಕೆಂಬ ಕೋರಿಕೆಯನ್ನೂ ಕೋರ್ಟ್ ತಳ್ಳಿಹಾಕಿದೆ. ಒಂದು ವೇಳೆ ಈ ಪ್ರಕರಣದ ವಿಚಾರಣೆ ನಡೆಯಲೇಬೇಕು ಎಂದಾದರೆ ತಾವು ಮೊದಲು ಹೈಕೋರ್ಟ್ ಮೆಟ್ಟಿಲೇರುವ ಅವಕಾಶ ಇದೆ ಎಂದು ಸುಪ್ರೀಂಕೋರ್ಟ್ ಸೂಚಿಸಿದೆ.

Edited By

Hema Latha

Reported By

Madhu shree

Comments