ಮಳೆ ಬರುವ ನಿರೀಕ್ಷೆ ಹೊತ್ತವರಿಗೆ ಇಲ್ಲಿದೆ ಸುದ್ದಿ...

ನೈಋತ್ಯ ಮಳೆ ಮಾರುತಗಳು ಮಾಯವಾದ ಬಳಿಕ ಒಂದೆರಡು ಬಾರಿ ಮಳೆ ಬಿದ್ದಿದ್ದು ಬಿಟ್ಟರೆ, ಬೆಂಗಳೂರು ಸೇರಿದಂತೆ ಕರ್ನಾಟಕದ ಹಲವೆಡೆ ಒಣಹವೆ ಮುಂದುವರೆದಿತ್ತು. ಆದರೆ, ತಿಂಗಳ ಕೊನೆಗೆ ಮತ್ತೆ ಮಳೆ ಮೋಡಗಳು ಆವರಿಸತೊಡಗಿವೆ. ರಾಜ್ಯದ ದಕ್ಷಿಣ ಒಳನಾಡಿನ ಜಿಲ್ಲೆಗಳ ಕೆಲ ಪ್ರದೇಶದಲ್ಲಿ ಸೋಮವಾರದಿಂದ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಹಾಗೂ ಸ್ಕೈ ಮ್ಯಾಟ್ ವರದಿ ಹೇಳುತ್ತಿದೆ.
ಬಂಗಾಳಕೊಲ್ಲಿಯ ನೈಋತ್ಯ ಭಾಗದಲ್ಲಿ ಶ್ರೀಲಂಕಾ ಸಮೀಪ ಮೇಲ್ಮೈ ಸುಳಿಗಾಳಿ ಸಹಿತ ಅಲ್ಪ ಪ್ರಮಾಣದ ವಾಯುಭಾರ ಕುಸಿತ ಉಂಟಾಗಿದೆ. ತಮಿಳುನಾಡು, ಕೇರಳ ಹಾಗೂ ಲಕ್ಷದ್ವೀಪ ಪ್ರದೇಶದಲ್ಲಿ ಸೋಮವಾರದಿಂದ ಹಿಂಗಾರು ಚುರುಕುವ ಸಾಧ್ಯತೆ ಕಂಡು ಬಂದಿದೆ. ಕರ್ನಾಟಕದ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಮೋಡ ಕವಿದ ವಾತಾವರಣ, ಇನ್ನೆರಡು ದಿನಗಳು ಮುಂದುವರೆಯಲಿದ್ದು, ತುಂತುರು ಹಾಗೂ ಗುಡುಗು ಸಹಿತ ಮಳೆ ಸಾಧ್ಯತೆಯಿದೆ.
Comments