ಮೆಟ್ರೋ ಪ್ರಯಾಣಿಕರೆ ಇನ್ಮುಂದೆ ಜೋಕೆ ,ದಂಡ ದುಬಾರಿಯಾಗಿದೆ ಓಕೆ.?

27 Nov 2017 10:47 AM | General
155 Report

ಹೌದು.., ಕಾಲ ಬದಲಾದಂತೆ, ಮೆಟ್ರೋ ರೇಟ್ ಕೂಡ ಬದಲಾಗುತ್ತಿದೆ. ಅದು ಪ್ರಯಾಣದ ದರವಲ್ಲ. ಪ್ರಯಾಣಿಕರು ಮಿಸ್ ಮಾಡುವ ಟೋಕನ್ ದರ. ದಂಡದ ರೂಪದಲ್ಲಿ ಪಾವತಿಸಬೇಕಿರುವ ದರದಲ್ಲಿ ಬದಲಾವಣೆಯಾಗಿದೆ. ಮೆಟ್ರೋ ಆರಂಭವಾಗಿ ಎರಡು ವರ್ಷಗಳೇ ಕಳೆದಿವೆ.

ಅಂದಿನಿಂದಲೂ ಪ್ರಯಾಣಿಕರ ನಿರ್ಲಕ್ಷ್ಯದಿಂದ ಮೆಟ್ರೋ ನಿಗಮ ಸಾಕಷ್ಟು ಟೋಕನ್​ಗಳನ್ನು ಕಳೆದುಕೊಂಡಿದೆ. ಒಂದು ಟೋಕನ್​ಗೆ ಅಂದಾಜು 40 ರೂಪಾಯಿ ತಗಲುತ್ತದೆ ಎಂದು ಅಂದಾಜಿಸಲಾಗಿದೆ. ಹೀಗಾಗಿ ಮೆಟ್ರೋ ಪ್ರಯಾಣದ ವೇಳೆ ಟೋಕನ್​ ಕಳೆದುಕೊಳ್ಳುವ ಪ್ರಯಾಣಿಕರಿಗೆ ಇದುವರೆಗೂ ಮೆಟ್ರೋ 50 ರೂಪಾಯಿ ದರ ವಿಧಿಸುತ್ತ ಬಂದಿತ್ತು. ಆದರೇ ಇತ್ತೀಚೆಗೆ ಪ್ರತಿ ತಿಂಗಳಿಗೆ ಅಂದಾಜು 1500 ಟೋಕನ್​ ಕಳೆದುಹೋಗುತ್ತಿತ್ತು. ಹೀಗಾಗಿ ಟೋಕನ್​ ಬಗ್ಗೆ ಪ್ರಯಾಣಿಕರಿಗೆ ಕಾಳಜಿ ಬೆಳೆಸುವ ನಿಟ್ಟಿನಲ್ಲಿ ಮೆಟ್ರೋ 50 ರೂಪಾಯಿ ದಂಡದ ಮೊತ್ತವನ್ನು, ದಿಢೀರ್ 500 ಕ್ಕೆ ಏರಿಸಿದ್ದು, ಜೊತೆಗೆ ಮೆಟ್ರೋ ಪ್ರಯಾಣದ ಗರಿಷ್ಠ ದರವನ್ನು ದಂಡವಾಗಿ ಪಾವತಿಸಬೇಕು ಎಂಬುದಾಗಿ ಬಿಎಂಆರ್ ಸಿಎಲ್ ಅಧಿಕಾರಿಗಳು ತಿಳಿಸಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿರುವ ಬಿಎಂಆರ್​ಸಿಎಲ್​ ಎಂಡಿ ಪ್ರದೀಪ ಸಿಂಗ್ ಖರೋಲ, ಕೆಲವು ಭಾರಿ ಪ್ರಯಾಣಿಕರು ಟೋಕನ್ ಪಡೆದು ಫ್ಲಾಟ್​ಪಾರಂ ಪ್ರವೇಶಿಸಿದರೂ, ಇಳಿಯುವ ನಿಲ್ದಾಣದಲ್ಲಿ ಟೋಕನ್ ವಾಪಸ್ ನೀಡದಿರುವುದು ಗಮನಕ್ಕೆ ಬಂದಿದೆ. ಹೀಗಾಗಿ ದಂಡದ ಮೊತ್ತ ಹೆಚ್ಚಿಸಲಾಗಿದೆ ಎಂದು ಹೇಳಿದ್ದಾರೆ. ಸೋ ಒಟ್ಟಿನಲ್ಲಿ ನೀವು ಇನ್ಮುಂದೆ ಮೆಟ್ರೋ ಪ್ರಯಾಣಿಸುವ ವೇಳೆ ಟೋಕನ್​ ಹುಶಾರಾಗಿಟ್ಟುಕೊಳ್ಳೋಕೆ ಮರಿಬೇಡಿ. ಒಂದು ವೇಳೆ ಮಿಸ್ ಮಾಡಿಕೊಂಡರೇ, ಹೇ ಬಿಡು ರೂ.50 ಅಷ್ಟೇ ಅಲ್ವಾ ದಂಡ ಕಟ್ಟೋಣ ಎಂದು ತಾತ್ಸಾರ ಮಾಡಿ, ದಂಡ ಕಟ್ಟೋಕೆ ಹೋದರೇ, ನಿಮಗೆ ಶಾಕ್ ಕಾದಿರುತ್ತದೆ. ಟೋಕನ್ ಕಳೆದಿದ್ದಕ್ಕೆ, ರೂ.500 ದಂಡವನ್ನು ಪಾವತಿಸಬೇಕಾಗುತ್ತದೆ.

Edited By

Hema Latha

Reported By

Madhu shree

Comments