ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ರಾಜಮನೆತನಕ್ಕೆ ಅಗೌರವ ತೋರಿದ ಸರ್ಕಾರ

25 Nov 2017 12:31 PM | General
264 Report

ಸಾಹಿತ್ಯ ಪರಿಷತ್ ಸಂಸ್ಥಾಪಕರಾದ ರಾಜವಂಶದವರನ್ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅಹ್ವಾನ ನೀಡದೆ ಸರ್ಕಾರ ಅಗೌರವ ತೋರಿದೆ. ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸರ್ಕಾರ ಮೈಸೂರಿನ ಯದುವಂಶದ ಮಹಾರಾಜ ಯದುವೀರ್ಗಿಲ್ಲ ಸಮ್ಮೇಳನಕ್ಕೆ ಆಹ್ವಾನ ನೀಡದೆ ಅವಮಾನ ಮಾಡಿದೆ. ರಾಜಮಾತೆ ಪ್ರಮೋದಾದೇವಿ ಒಡೆಯರ್ರನ್ನು ಸ್ವಾಗತ ಸಮಿತಿ ಕರೆಯದೇ ಅವಮಾನ ಮಾಡಿದೆ.

ಮಲ್ಲಿಗೆ ನಗರಿ ಮೈಸೂರಿನಲ್ಲಿ ಕನ್ನಡ ಕಲರವಕ್ಕೆ ಭರ್ಜರಿ ಚಾಲನೆ ಸಿಕ್ಕಿದೆ. 83ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವು ಸಾಂಸ್ಕೃತಿಕ ವೈಭವದೊಂದಿಗೆ ಅನಾವರಣಗೊಂಡಿದೆ. ನಾಡಿನ ಮೂಲೆ-ಮೂಲೆಗಳಿಂದ ಬಂದಿದ್ದ ಸಹಸ್ರಾರು ಕನ್ನಡಿಗರು ನುಡಿ ಜಾತ್ರೆಯಲ್ಲಿ ಮಿಂದೆದ್ದರು.  ಆದರೆ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸರ್ಕಾರ ಮೈಸೂರಿನ ಯದುವಂಶದವರನ್ನೇ ಅಹ್ವಾನ ನೀಡದೆ ಸರ್ಕಾರ ಅಗೌರವ ತೋರಿದೆ.

Edited By

Shruthi G

Reported By

Madhu shree

Comments