ಮೈಸೂರಿನಲ್ಲಿ ಕನ್ನಡ ನುಡಿಜಾತ್ರೆಯ ಸಂಭ್ರಮ

24 Nov 2017 11:48 AM | General
535 Report

ನುಡಿಹಬ್ಬಕ್ಕೆ ಮಹಾರಾಜ ಕಾಲೇಜು ಮೈದಾನದಲ್ಲಿ ಪ್ರಖ್ಯಾತ ಮೈಸೂರು ಅರಮನೆ ದರ್ಬಾರ್ ಹಾಲ್‍ನ ಪ್ರತಿರೂಪದಂತೆ ವೇದಿಕೆಯನ್ನು ಸಿದ್ದಪಡಿಸಲಾಗಿದೆ. ರಾಜಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ ಮಹಾಮಂಟಪ, ರಾಷ್ಟ್ರಕವಿ ಕುವೆಂಪು ಪ್ರಧಾನ ವೇದಿಕೆಗೆ ಮಲೆ ಮಹದೇಶ್ವರ ಮಹಾದ್ವಾರ ಎಂದು ನಾಮಕರಣ ಮಾಡಿರುವುದು ಮೈಸೂರಿನ ಘನತೆಯನ್ನು ಎತ್ತಿ ಹಿಡಿದಿದೆ.

 ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಉದ್ಘಾಟಿಸುವರು. ವಿರೋಧ ಪಕ್ಷದ ನಾಯಕ ಜಗದೀಶ್ ಶೆಟ್ಟರ್ ಸ್ಮರಣ ಸಂಚಿಕೆ ಮಾಡುವರು. ಮುಖ್ಯ ಅತಿಥಿಗಳಾಗಿ ಶಾಸಕರಾದ ಎಂ.ಕೆ.ಸೋಮಶೇಖರ್, ಜಿ.ಟಿ.ದೇವೇಗೌಡ, ಕೆ.ವೆಂಕಟೇಶ್, ಎಚ್.ಪಿ.ಮಂಜುನಾಥ್, ಸಾ.ರಾ.ಮಹೇಶ್, ಸಂದೇಶ್ ನಾಗರಾಜ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿ ಚಕ್ರವರ್ತಿ ಮೋಹನ್, ಇಲಾಖೆ ನಿರ್ದೇಶಕ ಎನ್.ಆರ್.ವಿಶುಕುಮಾರ್ ಆಗಮಿಸುವರು. ಪುಸ್ತಕ ಮಳಿಗೆಗಳನ್ನು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ತನ್ವೀರ್ ಸೇಠ್ ಉದ್ಘಾಟಿಸುವರು. ಪರಿಷತ್ ಪ್ರಕಟಿಸಿರುವ ಪುಸ್ತಕಗಳನ್ನು ಸಕ್ಕರೆ ಸಚಿವೆ ಮೋಹನ್‍ಕುಮಾರಿ, ವಿವಿಧ ಲೇಖಕರ ಪುಸ್ತಕಗಳನ್ನು ಸಂಸದ ಪ್ರತಾಪ್ ಸಿಂಹ ಬಿಡುಗಡೆ ಮಾಡುವರು.

Edited By

Hema Latha

Reported By

Madhu shree

Comments