ಲೈವ್ ಕಾರ್ಯಕ್ರಮದಲ್ಲಿ ಖಡ್ಗ ತೋರಿಸಿ ಆಕ್ರೋಶ ವ್ಯೆಕ್ತ ಪಡಿಸಿದ ರಜಪೂತ

18 Nov 2017 2:19 PM | General
560 Report

ಪದ್ಮಾವತಿ' ಚಿತ್ರವನ್ನ ವಿರೋಧಿಸುತ್ತಿರುವುದೇಕೆ? ಎಂಬ ವಿಷ್ಯಕ್ಕೆ ಸಂಬಂಧಿಸಿದಂತೆ ಸುದ್ದಿ ವಾಹಿನಿಯಲ್ಲಿ ಚರ್ಚೆ ನಡೆಸಲಾಗುತ್ತಿತ್ತು. ಕಾರ್ಯಕ್ರಮದ ಮಧ್ಯೆ ರಜಪೂತ ವ್ಯಕ್ತಿ ತಾನು ತಂದಿದ್ದ ಖಡ್ಗ ಹೊರ ತೆಗೆದು ದೀಪಿಕಾ ಪಡುಕೋಣೆಯ ವಿರುದ್ಧ ಕಿಡಿ ಕಾರಿದರು.

ಈ ನಡವಳಿಕೆಯನ್ನ ಪ್ರಶ್ನಿಸಿದ ನಿರೂಪಕ ನಂತರ ಖಡ್ಗವನ್ನ ಕೆಳಗೆ ಇಡಲು ಸೂಚಿಸಿ ಕಾರ್ಯಕ್ರಮ ಮುನ್ನಡೆಸಿದರು. ಒಂದು ಕಡೆ 'ಪದ್ಮಾವತಿ' ಸಿನಿಮಾ ಅಭಿನಯಸಿದ್ದು ಹೆಮ್ಮೆ ಎಂದು ದೀಪಿಕಾ ಹೇಳುತ್ತಿದ್ದರೇ, ಮತ್ತೊಂದೆಡೆ ರಜಪೂತರು ದೀಪಿಕಾ ತಲೆಗೆ 5 ಕೋಟಿ ಬೆಲೆ ಕಟ್ಟಿದ್ದಾರೆ. ಈ ಎಲ್ಲ ಬೆಳವಣಿಗೆಗಳನ್ನ ಅರಿತ ಪೊಲೀಸರು ದೀಪಿಕಾ ಮತ್ತು ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿಗೆ ಭದ್ರತೆ ನೀಡಿದ್ದಾರೆ.

Edited By

Shruthi G

Reported By

Madhu shree

Comments