ವಿಶ್ವದಲ್ಲಿಯೇ ದುಬಾರಿ ಬೆಲೆಗೆ ಮಾರಾಟವಾದ ಪೇಟಿಂಗ್ ಯಾವುದು ಗೊತ್ತ..!!

17 Nov 2017 1:10 PM | General
340 Report

ನ್ಯೂಯಾರ್ಕ್ ನ ಪ್ರಸಿದ್ಧ ಕಲಾವಿದ ಲಿಯೊನಾರ್ಡೋ ಡಾ ವಿಂಚಿಯ 500 ವರ್ಷಗಳ ಹಳೆಯ ಪೇಟಿಂಗ್ ಒಂದು ದುಬಾರಿ ಬೆಲೆಗೆ ಮಾರಾಟವಾಗಿದೆ. ಸಲ್ವಾಟರ್ ಮುಂಡಿ ಪೇಟಿಂಗ್ ಹರಾಜೊಂದರಲ್ಲಿ 45.03 ಕೋಟಿ ಡಾಲರ್ ಗೆ ಮಾರಾಟವಾಗಿದೆ. ಈ ಪೇಟಿಂಗ್ ಹರಾಜಿಗಿಟ್ಟಿದ್ದ ಕ್ರಿಸ್ಟಿ ಸಂಸ್ಥೆ ಈ ಬಗ್ಗೆ ಅಧಿಕೃತ ಹೇಳಿಕೆ ನೀಡಿದೆ.

ವಿಶ್ವದಲ್ಲಿಯೇ ಇದು ಅತ್ಯಂತ ದುಬಾರಿ ಬೆಲೆಗೆ ಮಾರಾಟವಾದ ಪೇಟಿಂಗ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಹಿಂದೆ ಪಾಬ್ಲೊ ಪಿಕಾಸೊ ಅವರ ದಿ ವುಮೆನ್ ಆಫ್ ಆಲ್ಜೀರ್ಸ್ ಅತ್ಯಂತ ದುಬಾರಿ ಬೆಲೆಗೆ ಮಾರಾಟವಾದ ಚಿತ್ರಕಲೆಯಾಗಿತ್ತು. ಪಿಕಾಸೊ ಈ ಪೇಟಿಂಗ್ 2015ರಲ್ಲಿ 17.94 ಕೋಟಿ ಡಾಲರ್ ಗೆ ಮಾರಾಟವಾಗಿತ್ತು. ಆಗ್ಲೂ ಕ್ರಿಸ್ಟಿ ಸಂಸ್ಥೆಯೇ ಹರಾಜು ಪ್ರಕ್ರಿಯೆ ನಡೆಸಿತ್ತು. ಸಲ್ವಾಟರ್ ಮುಂಡಿ ಹಾಗೂ ಸೇವಿಯರ್ ಆಫ್ ದಿ ವರ್ಲ್ಡ್ ಚಿತ್ರಕಲೆಯಲ್ಲಿ ಏಸು ಕ್ರಿಸ್ತನನ್ನು ಚಿತ್ರಿಸಲಾಗಿದೆ. ಹರಾಜು ಪ್ರಕ್ರಿಯೆ ಶುರುವಾಗಿ ಕೇವಲ 20 ನಿಮಿಷದಲ್ಲಿ ಈ ಪೇಟಿಂಗ್ ಮಾರಾಟವಾಗಿದೆ. ಆದ್ರೆ ಹರಾಜು ಸಂಸ್ಥೆ ಖರೀದಿ ಮಾಡಿದವರ ಹೆಸರನ್ನು ಬಹಿರಂಗಪಡಿಸಿಲ್ಲ.

Edited By

Shruthi G

Reported By

Madhu shree

Comments