ವಕೀಲೆ ಕಾರ್ನೆಲಿಯಾ ಸೊರಾಬ್ಜಿಗೆ ಗೂಗಲ್ ಡೂಡಲ್ ಗೌರವ

15 Nov 2017 11:05 AM | General
254 Report

ಸೊರಬ್ಜಿಯವರು ಮುಂಬೈ ವಿಶ್ವವಿದ್ಯಾಲಯದಿಂದ ಪದವೀಧರೆಯಾದ ಮೊದಲ ಮಹಿಳೆ ಮತ್ತು ಆಕ್ಸ್ ಫರ್ಡ್ ಕಾನೂನು ವಿದ್ಯಾಲಯದಲ್ಲಿ ಭಾರತದ ಮೊದಲ ಮಹಿಳೆ ಕೂಡ. ಅವರ 151ನೇ ಜನ್ಮ ದಿನಾಚರಣೆ ಪ್ರಯುಕ್ತ ಗೂಗಲ್ ಡೂಡಲ್ ಮೂಲಕ ಗೌರವ ನಮನ ಸಲ್ಲಿಸಿದೆ.

ಭಾರತದಲ್ಲಿ ಬ್ರಿಟಿಷರ ಆಡಳಿತ ಕಾಲದಲ್ಲಿ ತಂದೆ ಅಥವಾ ಗಂಡನ ಆಶ್ರಯದಲ್ಲಿ ಮಹಿಳೆಯರು ಇದ್ದಂತಹ ಸಮಯದಲ್ಲಿ ಸೊರಬ್ಜಿ ಅದ್ಭುತ ಸಾಧನೆ ಮಾಡಿದ್ದರು. ಆ ಸಮಯದಲ್ಲಿ ಭಾರತದಲ್ಲಿ ಪರ್ದಾ ಸಂಪ್ರದಾಯ ಜಾರಿಯಲ್ಲಿದ್ದು ಮಹಿಳೆಯರು ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದು ನಿಷೇಧವಿತ್ತು. 1886 ನವೆಂಬರ್ 15ರಂದು ನಾಶಿಕ್ ನಲ್ಲಿ ರೆವೆರೆಂಡ್ ಸೊರಬ್ಜಿ ಕರ್ಸೆಡ್ಜಿ ಮತ್ತು ಫ್ರಾನ್ಸಿಕಾ ಫೊರ್ಡ್ ಅವರಿಗೆ 9 ಮಕ್ಕಳಲ್ಲಿ ಒಬ್ಬರಾಗಿ ಜನಿಸಿದರು.

Edited By

venki swamy

Reported By

Madhu shree

Comments