ವೈದ್ಯರು ಹಾಗೂ ರೋಗಿಗಳ ಸಮಸ್ಯೆ ಕೇಳುವರು ಯಾರಿಲ್ಲ..?

13 Nov 2017 2:00 PM | General
373 Report

ಖಾಸಗಿ ವೈದ್ಯಕೀಯ ಸಂಸ್ಥೆಗಳ ತಿದ್ದುಪಡಿ ವಿಧೇಯಕಕ್ಕೆ ವಿರೋಧ ವ್ಯಕ್ತಪಡಿಸಿ ವೈದ್ಯರು ಧರಣಿ ಕೂಡಲೆಂದು ಬೆಳಗಾವಿಗೆ ತೆರಳಿದ್ದಾರೆ. ಆದರೆ ಇದರ ಕುರಿತು ಯಾವುದೇ ಮಾಹಿತಿ ಇರದ ರೋಗಿಗಳು ಸೋಮವಾರ ಎಂದಿನಂತೆ ಚಿಕಿತ್ಸೆ ದೊರೆಯುತ್ತದೆ ಎಂಬ ನಿರೀಕ್ಷೆಯಲ್ಲಿ ಆಸ್ಪತ್ರೆಗಳಿಗೆ ತೆರಳಿ ನಿರಾಸೆಗೆ ಒಳಗಾಗಿದ್ದಾರೆ.

ರಾಜ್ಯದ ಹಲವೆಡೆ ಇದೇ ಪರಿಸ್ಥಿತಿ ಇದೆ, ಬಳ್ಳಾರಿಯಲ್ಲಿ ಬಹುತೇಕ ಎಲ್ಲ ಕ್ಲಿನಿಕ್​ಗಳಲ್ಲಿ, ನರ್ಸಿಂಗ್ ಹೊಂಗಳಲ್ಲಿ ಸೇವೆ ಸ್ಥಗಿತವಾಗಿದೆ. ಬಾಗಲಕೋಟೆಯಲ್ಲಿ 250 ಖಾಸಗಿ ಆಸ್ಪತ್ರೆಗಳು ಬಂದ್ ಮಾಡಿ, ಸುಮಾರು ಎರಡು ಸಾವಿರ ಖಾಸಗಿ ವೈದ್ಯರು ಬೆಳಗಾವಿಗೆ ತೆರಳಿದ್ದಾರೆ. ವಿಜಯಪುರದ ಸುಮಾರು 460 ಖಾಸಗಿ ವೈದ್ಯರು ಬೆಳಗಾವಿಗೆ ತೆರಳಿದ್ದು, 120 ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಸ್ಥಗಿತಗೊಳಿಸಲಾಗಿದೆ. ಇನ್ನು, ಬೆಂಗಳೂರಿನಿಂದಲೂ ಸಾವಿರಾರು ವೈದ್ಯರು ಧರಣಿಯಲ್ಲಿ ಪಾಲ್ಗೊಳ್ಳುವ ಸಾಧ್ಯತೆಯಿದೆ. ಅಲ್ಲದೆ, ನೆಲಮಂಗಲ ತಾಲೂಕಿನಾದ್ಯಂತ ಖಾಸಗಿ ಆಸ್ಪತ್ರೆಗಳು ಬಂದ್ ಮಾಡಲಾಗಿದೆ. ವೈದ್ಯರ ಈ ನಡೆಯಿಂದಾಗಿ ಬೆಂಗಳೂರು ಸೇರಿದಂತೆ ಖಾಸಗಿ ವೈದ್ಯಕೀಯ ಸೇವೆಯಲ್ಲಿ ತೀವ್ರ ಸಮಸ್ಯೆ ಎದುರಾಗಿದೆ.

Edited By

Hema Latha

Reported By

Madhu shree

Comments