ಕುತೂಹಲ ಮೂಡಿಸಿದ ಕುಮಾರ ಪರ್ವ ಯಾತ್ರೆ..!!

07 Nov 2017 12:29 PM | General
8320 Report

ಮುಂದಿನ ವಿಧಾನಸಭಾ ಚುನಾವಣೆಗೆ ಜೆಡಿಎಸ್ ಇಂದು ಚಾಮುಂಡಿ ಬೆಟ್ಟದಲ್ಲಿ ವಿಶೇಷ ಪೂಜೆ ಸಲ್ಲಿಸಿ ಕುಮಾರ ಪರ್ವದ ವಿಕಾಸ ಯಾತ್ರೆಗೆ ಚಾಲನೆ ನೀಡಿದ್ದಾರೆ. ಈ ವಿಕಾಸ ಯಾತ್ರೆಯ ಬಸ್‌ನ ವಿನ್ಯಾಸಕ್ಕೆ ಒಂದು ಕೋಟಿ ರೂ. ಹಣ ಖರ್ಚು ಮಾಡಲಾಗಿದೆ. ಈ ಬಸ್‌ನ ನೋಂದಣಿ ಸಂಖ್ಯೆ ಕೆ.ಎ-59-ಎಂ-3366 ಆಗಿದೆ. ಇನ್ನೂ ಎಚ್.ಡಿ. ಕುಮಾರಸ್ವಾಮಿ ಬಳಸುವ ಬಿಳಿ ಬಣ್ಣದ ಫಾರ್ಚುನರ್ ಕಾರ್ ನಂಬರ್ ಕೆಎ-42-ಪಿ-3366 ಆಗಿದೆ. ಈ ಎರಡು ವಾಹನಗಳ ನಂಬರ್ ಒಂದೇ ಆಗಿರುವುದು ಕುತೂಹಲ ಮೂಡಿಸಿದೆ.

ಸಂಖ್ಯೆ 6 ಶುಕ್ರ ದೆಸೆ. ಈ ಹಿನ್ನಲೆಯಲ್ಲಿ ಕುಮಾರಸ್ವಾಮಿ ಅವರಿಗೆ ಜೋತಿಷ್ಯರೊಬ್ಬರು 6 ಸಂಖ್ಯೆಯ ವಾಹನವನ್ನ ಬಳಸುವಂತೆ ನೀಡಿದ ಸೂಚನೆಯ ಹಿನ್ನಲೆಯಲ್ಲಿ ವಿಕಾಸ ಯಾತ್ರೆಯ ವಾಹನದ ನೋಂದಣಿ ಸಂಖ್ಯೆ ಹಾಗೂ ಕುಮಾರಸ್ವಾಮಿ ಬಳಸುವ ಕಾರಿನ ನಂಬರ್‌ ಒಂದೇ ಆಗಿದೆ ಎನ್ನಲಾಗ್ತಿದೆ. 

Edited By

Shruthi G

Reported By

Shruthi G

Comments