ಇದೆ ತಿಂಗಳ ಅಂತ್ಯಕ್ಕೆ ಬಿಡುಗಡೆಯಾಗಲಿದೆ ಮಾಜಿ ಪ್ರಧಾನಿ ದೇವೇಗೌಡರ ಆತ್ಮಚೆರಿತ್ರೆ

05 Nov 2017 2:40 PM | General
1374 Report

ಮಾಜಿ ಪ್ರಧಾನಿ, ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ, ಎಚ್.ಡಿ.ದೇವೇಗೌಡರ ರಾಜಕೀಯ ಬದುಕು, ಬಾಲ್ಯ, ಜೀವನದ ಸಮಗ್ರ ಮಾಹಿತಿಯನ್ನು ಒಳಗೊಂಡ ಆತ್ಮಚೆರಿತ್ರೆ, ಈ ತಿಂಗಳ ಅಂತ್ಯಕ್ಕೆ ಬಿಡುಗಡೆಯಾಗಲಿದೆ. ಈ ಕುರಿತು ಮಾಹಿತಿ ನೀಡಿದ ಜೆಡಿಎಸ್ ನ ವಕ್ತಾರ ವೈ.ಎಸ್.ವಿ ದತ್ತಾ, ಬೆಂಗಳೂರಿನಲ್ಲಿ ಈ ವಿಷಯ ತಿಳಿಸಿದ್ದಾರೆ.

ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಆತ್ಮಚರಿತ್ರೆಯ ಪುಸ್ತಕ, ಒಟ್ಟು ಮೂರು ಭಾಗಗಳಲ್ಲಿದ್ದು, 400 ಪುಟಗಳನ್ನು ಒಳಗೊಂಡಿರುತ್ತದೆ. ಈ ಮೂರು ಭಾಗದಲ್ಲಿ, ಎಚ್.ಡಿ.ದೇವೇಗೌಡರ ಬಾಲ್ಯ, ಜೀವನ, ರಾಜಕೀಯ ಬದುಕಿನ ಚಿತ್ರಣಗಳು ಇರಲಿವೆ. ಈ ಪುಸ್ತಕವನ್ನು ದೇವೇಗೌಡರ ಹಿರಿಯ ಮಗಳು ಶೈಲಜಾ ಸಿದ್ದಪಡಿಸುತ್ತಿರುವುದಾಗಿ ವೈ.ಎಸ್.ವಿ.ದತ್ತಾ ಹೇಳಿದರು.ಈ ಆತ್ಮಚೆರಿತ್ರೆಗೆ ಟೈಟಲ್ ಇನ್ನೂ ಗೊತ್ತು ಮಾಡಿಲ್ಲ. ಇಂತಹ ಪುಸ್ತಕದಲ್ಲಿ ದೇವೇಗೌಡರ ರಾಜಕೀಯ ಜೀವನದ ಗೌಪ್ಯ ಮಾಹಿತಿಗಳನ್ನೂ ತಿಳಿಸಿದ್ದಾರೆ. ಈ ಮಾಹಿತಿಗಳೆಲ್ಲಾ ದಾಖಲೆ ಸಮೇತವಾಗಿ, ಪುಸ್ತಕದಲ್ಲಿ ಪ್ರಕಟವಾಗಲಿದೆ. ಒಟ್ಟಾರೆ ದೇವೇಗೌಡರ ಜೀವನದ ಎಲ್ಲಾ ವಿಚಾರಗಳನ್ನೂ ಜೀವನ ಚೆರಿತ್ರೆ ಪುಸ್ತಕದಲ್ಲಿ ಬಿಚ್ಚಿಡಲಾಗಿದೆ ಎಂದು ಜೆಡಿಎಸ್ ನ ವೈ.ಎಸ್.ವಿ.ದತ್ತಾ ಹೇಳಿದರು..

Edited By

Shruthi G

Reported By

Shruthi G

Comments