ಕೃಷಿ ವಿವಿಗೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಹೆಸರಿಡುವಂತೆ ಒತ್ತಯ

02 Nov 2017 3:35 PM | General
3343 Report

ರಾಜ್ಯದ ಯಾವುದಾದರೂ ಕೃಷಿ ವಿಶ್ವ ವಿದ್ಯಾಲಯಕ್ಕೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಹೆಸರು ನಾಮಕರಣ ಮಾಡಬೇಕೆಂದು ಹಸಿರು ಪ್ರತಿಷ್ಠಾನದ ಅಧ್ಯಕ್ಷ ಕೆ.ಜಿ.ಕುಮಾರ್ ಒತ್ತಾಯಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಜಿ ಪ್ರಧಾನಿಯಾಗಿ, ಮುಖ್ಯಮಂತ್ರಿಯಾಗಿ ಕೃಷಿ, ನೀರಾವತಿ ಹೈನುಗಾರಿಕೆಯಲ್ಲಿ ರೈತರ ದನಿಯಾಗಿ ದೇವೇಗವಡರು ಅಪಾರ ಕೊಡುಗೆ ನೀಡಿದ್ದಾರೆ.ಅವರು ರಾಜಕೀಯಕ್ಕೆ ಬಂದು 50 ವರ್ಷ ತುಂಬಿದೆ. ಈ ಸಂದರ್ಭದಲ್ಲಿ ರಾಜ್ಯದ ಯಾವುದಾದರೂ ಕೃಷಿ ವಿವಿಗೆ ಅವರ ಹೆಸರನ್ನು ನಾಮಕರಣ ಮಾಡಬೇಕೆಂದು ರಾಜ್ಯ ಸರ್ಕಾರವನ್ನು ಹಸಿರು ಪ್ರತಿಷ್ಠಾನ ಒತ್ತಾಯಿಸಿದೆ.

Edited By

Shruthi G

Reported By

Shruthi G

Comments