ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಹೋಗೋರಿಗೆ ಇಲ್ಲಿದೆ ಗುಡ್‍ನ್ಯೂಸ್

31 Oct 2017 11:03 AM | General
498 Report

ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೋಗೋರಿಗೆ ಒಂದು ಗುಡ್‍ನ್ಯೂಸ್. ಇನ್ಮುಂದೆ ಟೋಲ್ ಕಟ್ಟದೇ ನೀವು ನಿಲ್ದಾಣಕ್ಕೆ ಹೋಗಬಹುದು. ಇದು ದಶಕಗಳ ಕನಸಾಗಿದ್ದು, ಕೊನೆಗೂ ಕೈಗೂಡುವ ಕಾಲ ಬಂದಿದೆ.

ದೇವನಹಳ್ಳಿ ಮಾರ್ಗವಾಗಿಯೇ ವಿಮಾನ ನಿಲ್ದಾಣಕ್ಕೆ ಹೋಗಬೇಕಿತ್ತು. ಅಲ್ಲಿ ಡಿಸೇಲ್, ಪೆಟ್ರೊಲ್ ಖರ್ಚಿಗಿಂತ ಟೋಲ್ ದುಡ್ಡೇ ಹೆಚ್ಚಾಗಿದೆ ಅಂತಾ ಎಲ್ಲರೂ ಪರಿತಪಿಸುತ್ತಿದ್ದರು. ಒಂದೆಡೆ ಟೋಲ್ ಬಿಸಿ, ಇನ್ನೊಂದೆಡೆ ಟ್ರಾಫಿಕ್ ಬಿಸಿಯಿಂದ ಜನರು ಒದ್ದಾಡುತ್ತಿದ್ದರು. ಆದರೆ ಸರ್ಕಾರ ವಿಮಾನ ನಿಲ್ದಾಣಕ್ಕೆ ಹೋಗಲು ಬೇರೊಂದು ಮಾರ್ಗದ ಸಿದ್ಧತೆ ಮಾಡಿಕೊಂಡಿದೆ. ಇನ್ನು ಒಂದು ವರ್ಷದೊಳಗೆ ಟೋಲ್ ಕಟ್ಟದೆ ಹೊಸ ರಸ್ತೆಯಲ್ಲಿ ಪ್ರಯಣ ಮಾಡಬಹುದು.

ಪೂರ್ವ ಭಾಗ: ಹೆಣ್ಣೂರು ಮೂಲಕ – ಬಾಗಲೂರು ವೃತ್ತ – ಬಂಡಿಕೊಡಿಕೇಹಳ್ಳಿ – ಮೈಲಾನಹಳ್ಳಿ – ಬೇಗೂರು ಮಾರ್ಗವಾಗಿ ನೇರವಾಗಿ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೋಗಬಹುದು. ಬಳ್ಳಾರಿ ರಸ್ತೆ ಬಳಸಿ ಬರಬೇಕಾಗಿಲ್ಲ. ಜೊತೆಗೆ 9. 64 ಕಿಮೀ ದೂರ ಕಡಿಮೆಯಾಗಲಿದೆ.ಪಶ್ಚಿಮ ಭಾಗ: ಮಾಗಡಿ ರೋಡ್ – ಪೀಣ್ಯ – ಯಲಹಂಕ ಮೂಲಕ ವಿಮಾನ ನಿಲ್ದಾಣಕ್ಕೆ ಬರಬಹುದು. ಇನ್ನು ಕಂಠೀರವ ವೃತ್ತದ ಬಳಿ ರಸ್ತೆ ಅಭಿವೃದ್ದಿಯಾಗುತ್ತಿದ್ದು, ಜೊತೆಗೆ ಬಿಐಎಲ್ ಗಂಗಮ್ಮ ಸರ್ಕಲ್ ರಸ್ತೆ ಕೂಡ ಅಭಿವೃದ್ಧಿಯಾಗಲಿದೆ.ಸದ್ಯಕ್ಕೆ ರಸ್ತೆ ಅಭಿವೃದ್ಧಿ ಕೆಲಸ ಅಂತಿಮ ಹಂತಕ್ಕೆ ಬಂದಿದ್ದು, ಪರ್ಯಾಯ ಮಾರ್ಗದಿಂದ ಟೋಲ್ ಕಂಪನಿಗೆ ದಿನಕ್ಕೆ ಸುಮಾರು 50 ಲಕ್ಷ ರೂ. ನಷ್ಟವಾಗಲಿದೆ. ಏಕೆಂದರೆ ಪ್ರತಿದಿನ ಬರೋಬ್ಬರಿ  50 ಸಾವಿರ ವಾಹನ ಟೋಲ್ ಬಳಿ ಓಡಾಡುತ್ತಿದ್ದು, ವಾರ್ಷಿಕವಾಗಿ 19 ಲಕ್ಷ ವಾಹನಗಳು ಈ ಮಾರ್ಗದಲ್ಲಿ ಸಂಚರಿಸುತ್ತಿವೆ.

ದೇವನಹಳ್ಳಿ ಟೋಲ್ ಕಂಪನಿ ಈಗ ಈ ಯೋಜನೆ ಜಾರಿಗೆ ಬರಬಾರದು ಎಂದು, ಸಾತನೂರು ಪಕ್ಕದ ಹೊಸ ರಸ್ತೆಯ ಪಕ್ಕ ಬೆಸ್ಕಾಂ ಗ್ರಿಡ್ ಇದೆ. ಅಲ್ಲದೆ ಈ ರಸ್ತೆಯೊಳಗೆ ಪವರ್ ಲೈನ್ ಹಾದು ಹೋಗುವುದರಿಂದ ಏರ್ ಪೋರ್ಟ್‍ಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ವಿಮಾನ ಅಥಾರಿಟಿಯವರಿಗೆ ಹೇಳಿದ್ದಾರೆ. ಇದರಿಂದ ಅಥಾರಿಟಿ ಈ ಯೋಜನೆ ನಿಲ್ಲಿಸಿ, ಪರ್ಯಾಯ ರಸ್ತೆ ಬೇಡ ಎಂದು ಸರ್ಕಾರಕ್ಕೆ ಪತ್ರ ಬರೆದಿದೆ. ಯೋಜನೆ ದ್ವಂದ್ವದಲ್ಲಿದೆ ಎಂದು ಸಂಚಾರಿ ತಜ್ಞ ಶ್ರೀಹರಿ ತಿಳಿಸಿದ್ದಾರೆ.

Edited By

Shruthi G

Reported By

Shruthi G

Comments