ಎಚ್ ಡಿಕೆ ರಾಜ್ಯ ಪ್ರವಾಸಕ್ಕೆ ಯಾರೆಲ್ಲ ಜೊತೆಗಿರಲಿದ್ದಾರೆ ಗೊತ್ತಾ ?

28 Oct 2017 10:52 AM | General
5426 Report

ಬೆಂಗಳೂರು: ಹೃದಯ ಚಿಕಿತ್ಸೆ ಬಳಿಕ ಮೊದಲ ಬಾರಿಗೆ ಅಖಾಡಕ್ಕೆ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಇಳಿಯಲಿದ್ದು, ಜೆಡಿಎಸ್ ಸಂಘಟನಾ ರ್ಯಾಲಿಯ ಚಾಲನೆಗೆ ಮುಂದಾಗಿದ್ದಾರೆ.2018 ರ ಚುನಾವಣಾ ಪ್ರಯುಕ್ತ ನವೆಂಬರ್ 3 ರಂದು ಜೆಡಿಎಸ್ ಸಂಘಟನಾ ರ್ಯಾಲಿಗೆ ಚಾಮುಂಡಿ ಬೆಟ್ಟದಲ್ಲಿ ಪೂಜೆ ಸಲ್ಲಿಸಿ ನಂತರ ರಾಜ್ಯ ಪ್ರವಾಸ ಮಾಡಲಿಸಿದ್ದಾರೆ. ಈ ಸಂಬಂಧ ಪತ್ನಿ ಅನಿತಾ ಕುಮಾರಸ್ವಾಮಿ ನೇತೃತ್ವದಲ್ಲಿ ಪ್ರವಾಸದ ರೂಪುರೇಷೆ ಸಿದ್ಧಪಡಿಸಲಾಗಿದೆ...

ಮೊದಲ ಹಂತದಲ್ಲಿ ಉತ್ತರ ಕರ್ನಾಟಕದ 62 ವಿಧಾನಸಭಾ ಕ್ಷೇತ್ರದಲ್ಲಿ ಕುಮಾರಸ್ವಾಮಿ ಪ್ರವಾಸ ಮಾಡಲಿದ್ದಾರೆ. ಈ ಪ್ರವಾಸದಲ್ಲಿ ಅವರ ಆರೋಗ್ಯ ಕಾಪಾಡಿಕೊಳ್ಳಲು ವಿಶೇಷ ಸಿದ್ಧತೆ ಮಾಡಿಕೊಂಡಿದ್ದಾರೆ. ಪ್ರವಾಸದಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ತಯಾರಿ ಮಾಡಿಕೊಂಡಿದ್ದಾರೆ. ಆರೋಗ್ಯದ ಸಮಸ್ಯೆ ಇರುವುದರಿಂದ ಮುಂಜಾಗೃತವಾಗಿ ಅಡುಗೆಯವರು, ಯೋಗ ಗುರು ಹಾಗೂ ಓರ್ವ ಪುರುಷ ನರ್ಸ್ ಹೆಚ್‍ಡಿಕೆ ಜೊತೆಗೆ ಇರಲಿದ್ದಾರೆ. ನಿಮಗೆ ಪಕ್ಷ ಮುಖ್ಯ ಆದರೆ ನಮಗೆ ನಿಮ್ಮ ಆರೋಗ್ಯ ಮುಖ್ಯ ಎಂಬ ಕುಟುಂಬದವರ ಮಾತಿಗೆ ತಲೆ ಬಾಗಿ ಹೆಚ್‍ಡಿಕೆ ಈ ಎಲ್ಲಾ ತಯಾರಿಗಳನ್ನು ಮಾಡಿಕೊಂಡಿದ್ದಾರೆ.

ವಿಶೇಷ ಬಸ್‍ನಲ್ಲೇ ಊಟ, ವಿಶ್ರಾಂತಿಗೆ ವ್ಯವಸ್ಥೆ ಮಾಡಲಾಗಿದೆ. ಹೆಚ್‍ಡಿಕೆ ಜೊತೆ ಅವರ ನೆಚ್ಚಿನ ಬಾಣಸಿಗ ಇರಲಿದ್ದಾರೆ. ಪ್ರತಿದಿನ ಮನೆ ಅಡುಗೆ ಬಸ್ಸಿನಲ್ಲೇ ಸಿದ್ಧವಾಗಲಿದೆ. ಪ್ರವಾಸ ಮುಗಿಯುವವರಗೆ ನಾನ್ ವೆಜ್ ತಿನ್ನದಿರಲು ಎಚ್ ಡಿಕೆ ನಿರ್ಧರಿಸಿದ್ದಾರೆ. ಆತರೋಗ್ಯದ ಹಿತದೃಷ್ಟಿಯಿಂದ ರಾತ್ರಿ 8 ಗಂಟೆ ಒಳಗಾಗಿ ಊಟ, ರಾತ್ರಿ 11 ಗಂಟೆಯೊಳಗಾಗಿ ನಿದ್ರೆ ಕಡ್ಡಾಯವಾಗಿದೆ. ಎಚ್ ಡಿಕೆ ಆರೋಗ್ಯ ತಪಾಸಣೆಗಾಗಿ ಜೊತೆಯಲ್ಲೇ ಒಬ್ಬ ಮೇಲ್ ನರ್ಸ್ ಇರಲಿದ್ದಾರೆ. ಪ್ರತಿ ದಿನದ ವ್ಯಾಯಾಮಕ್ಕೆ ಜೊತೆಗೊಬ್ಬ ಯೋಗ ಗುರುವನ್ನು ಎಚ್ ಡಿಕೆ ಕರೆದೊಯ್ಯಲಿದ್ದಾರೆ.

Edited By

Suresh M

Reported By

Shruthi G

Comments