ಪಿಯುಸಿ ಪರೀಕ್ಷಾ ವೇಳಾ ಪಟ್ಟಿ ಪ್ರಕಟ

27 Oct 2017 10:21 AM | General
623 Report

ಈ ಬಾರಿ ಸುಮಾರು 7 ಲಕ್ಷ ವಿದ್ಯಾರ್ಥಿಗಳು ದ್ವಿತೀಯ ಪಿಯುಸಿ ಪರೀಕ್ಷೆ ಬರೆಯಲಿದ್ದಾರೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಖಾತೆ ಸಚಿವ ತನ್ವೀರ್ ಸೇಠ್ ತಿಳಿಸಿದ್ದಾರೆ. ದ್ವಿತೀಯ ಪಿ.ಯು.ಸಿ. ಪರೀಕ್ಷೆ ಮಾರ್ಚ್ 1 ರಿಂದ ಆರಂಭವಾಗಲಿದ್ದು, ಮಾರ್ಚ್ 16 ವರೆಗೂ ನಡೆಯಲಿದೆ. ಇದು ತಾತ್ಕಾಲಿಕ ವೇಳಾಪಟ್ಟಿಯಾಗಿದ್ದು, ನವೆಂಬರ್ 24 ರ ವರೆಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಲಾಗಿದೆ.

ಪ್ರಸಕ್ತ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆಗಳು ಮಾರ್ಚ್ 23 ರಿಂದ ಏಪ್ರಿಲ್ 4 ರ ವರೆಗೆ ನಡೆಯಲಿವೆ. ಅದೇ ರೀತಿ ದ್ವಿತೀಯ ಪಿ.ಯು.ಸಿ. ಪರೀಕ್ಷೆ ಮಾರ್ಚ್ 1 ರಿಂದ ಆರಂಭವಾಗಲಿದ್ದು, ಮಾರ್ಚ್ 16 ವರೆಗೂ ನಡೆಯಲಿದೆ. ಇದು ತಾತ್ಕಾಲಿಕ ವೇಳಾಪಟ್ಟಿಯಾಗಿದ್ದು, ನವೆಂಬರ್ 24 ರ ವರೆಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಲಾಗಿದೆ.ಮಾರ್ಚ್ 1 ರಂದು ಅರ್ಥಶಾಸ್ತ್ರ, ಭೌತಶಾಸ್ತ್ರ
ಮಾರ್ಚ್ 2 ರಂದು ಮನಃಶಾಸ್ತ್ರ, ಎಲೆಕ್ಟ್ರಾನಿಕ್ಸ್, ಕಂಪ್ಯೂಟರ್ ಸೈನ್ಸ್
ಮಾರ್ಚ್ 3 ರಂದು ಹಿಂದಿ, ತೆಲುಗು, ಮರಾಠಿ, ಫ್ರೆಂಚ್
ಮಾರ್ಚ್ 5 ರಂದು ಬ್ಯುಸಿನೆಸ್ ಸ್ಟಡೀಸ್, ಜೀವಶಾಸ್ತ್ರ
ಮಾರ್ಚ್ 6 ರಂದು ರಾಜ್ಯಶಾಸ್ತ್ರ
ಮಾರ್ಚ್ 8 ರಂದು ಐಚ್ಛಿಕ ಕನ್ನಡ, ಅಕೌಂಟೆನ್ಸಿ, ರಸಾಯನಶಾಸ್ತ್ರ
ಮಾರ್ಚ್ 9 ರಂದು ಸಂಖ್ಯಾಶಾಸ್ತ್ರ, ತರ್ಕಶಾಸ್ತ್ರ, ಶಿಕ್ಷಣ
ಮಾರ್ಚ್ 10 ರಂದು ಗೃಹ ವಿಜ್ಞಾನ, ಇತಿಹಾಸ,
ಮಾರ್ಚ್ 12 ರಂದು ಸಮಾಜಶಾಸ್ತ್ರ, ಗಣಿತ, ಮೂಲ ಗಣಿತ
ಮಾರ್ಚ್ 13 ರಂದು ಉರ್ದು, ಸಂಸ್ಕೃತ
ಮಾರ್ಚ್ 14 ರಂದು ಇಂಗ್ಲಿಷ್
ಮಾರ್ಚ್ 15 ರಂದು ಭೂಗೋಳ, ಕರ್ನಾಟಕ ಸಂಗೀತ, ಭೂಗರ್ಭ ಶಾಸ್ತ್ರ
ಮಾರ್ಚ್ 16 ರಂದು ಕನ್ನಡ, ತಮಿಳು, ಮಲಯಾಳಂ, ಅರೇಬಿಕ್

Edited By

venki swamy

Reported By

Madhu shree

Comments