ಚಾಮರಾಜೇಂದ್ರ ಮೃಗಾಲಯದಲ್ಲಿ ಮರವೇರಿ ಕುಳಿತ ಚಿರತೆ

26 Oct 2017 2:01 PM | General
531 Report

ಚಿರತೆ ಕಾಣಿಸಿಕೊಳ್ಳುತ್ತಿದ್ದಂತೆ ಸಾರ್ವಜನಿಕರಿಗೆ ಮೃಗಾಲಯದ ಒಳಗಡೆ ಪ್ರವೇಶವನ್ನು ನಿಷೇಧಿಸಲಾಯಿತು. ವಿಷಯ ತಿಳಿದು ಸ್ಥಳಾಕ್ಕಾಗಮಿಸಿದ ಅರಣ್ಯ ಸಿಬ್ಬಂದಿ ಏರ್ ಗನ್ ಮೂಲಕ ಚಿರತೆಗೆ ಅರವಳಿಕೆ ಮದ್ದು ನೀಡಿ ಚಿತರೆಯನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

ಚಾಮುಂಡಿ ಬೆಟ್ಟದಿಂದ ಬಂದ ಚಿರತೆಯೊಂದು ನಗರದ ಶ್ರೀ ಚಾಮರಾಜೇಂದ್ರ ಮೃಗಾಲಯದ ಮರವೇರಿ ಕುಳಿತು ಕೆಲಕಾಲ ಆತಂಕ ಸೃಷ್ಟಿಸಿದ ಘಟನೆ ನಡೆಯಿತು. ಮೃಗಾಲಯದಲ್ಲಿನ ಚಿರತೆಗಳೆಲ್ಲಾ ಬೋನಿನಲ್ಲಿವೆ. ಈ ಚಿರತೆ ಹೊರಗಡೆಯಿಂದ ಬಂದು ಮರವೇರಿ ಕುಳಿತಿತ್ತು. ಕಾರ್ಯಾಚರಣೆ ನಡೆಸಿ ಒಂದೂವರೆ ವರ್ಷದ ಗಂಡು ಚಿರತೆಯನ್ನು ಸೆರೆ ಹಿಡಿಯಲಾಗಿದೆ ಎಂದು ಮೃಗಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

Edited By

Hema Latha

Reported By

Madhu shree

Comments