ಪ್ರಭಾಸ್ ಗೆ ಅನುಷ್ಕಾ ಕೊಟ್ಟ ಗಿಫ್ಟ್ ಏನು ಗೊತ್ತಾ?

23 Oct 2017 3:56 PM | General
505 Report

ಬಾಹುಬಲಿ ಜೋಡಿ ಅನುಷ್ಕಾ ಶೆಟ್ಟಿ ಹಾಗೂ ಪ್ರಭಾಸ್ ಬಗ್ಗೆ ಒಂದಿಲ್ಲೊಂದು ಗಾಸಿಪ್ ಹುಟ್ಟಿಕೊಳ್ತಾನೇ ಇದೆ. ಇಬ್ಬರ ಮಧ್ಯೆ ಅಫೇರ್ ಇದೆ, ಡಿಸೆಂಬರ್ ನಲ್ಲಿ ನಿಶ್ಚಿತಾರ್ಥ ಮಾಡಿಕೊಳ್ತಿದ್ದಾರೆ ಅಂತಾನೂ ಹೇಳಲಾಗ್ತಿದೆ. ಆದ್ರೆ ಪ್ರಭಾಸ್ ಮಾತ್ರ ಅಂಥದ್ದೇನೂ ಇಲ್ಲ, ನಾವಿಬ್ಬರೂ ಗುಡ್ ಫ್ರೆಂಡ್ಸ್ ಎನ್ನುತ್ತಿದ್ದಾರೆ.

ಇನ್ನೊಂದ್ಕಡೆ ಸಾಹೋ ಚಿತ್ರದಲ್ಲಿ ಅನುಷ್ಕಾ, ಪ್ರಭಾಸ್ ಗೆ ನಾಯಕಿಯಾಗಿಲ್ಲ ಅನ್ನೋ ಬೇಸರವೂ ಅಭಿಮಾನಿಗಳಲ್ಲಿದೆ. ಅದೇನೇ ಆದ್ರೂ ಪ್ರಭಾಸ್ ಹಾಗು ಅನುಷ್ಕಾ ಈಗಲೂ ಸಖತ್ ಕ್ಲೋಸಾಗಿದ್ದಾರೆ. ಅನುಷ್ಕಾಗೆ ಪ್ರಭಾಸ್ ಬದುಕಿನಲ್ಲಿ ಮಹತ್ವದ ಸ್ಥಾನವಿದೆ ಅನ್ನೋದು ಪಕ್ಕಾ ಆಗಿದೆ.

ಇದಕ್ಕೆ ಸಾಕ್ಷಿ ಅಂದ್ರೆ ಅನುಷ್ಕಾ ಶೆಟ್ಟಿ, ಪ್ರಭಾಸ್ ಗೆ ಕೊಟ್ಟಿರೋ ಬರ್ತಡೇ ಗಿಫ್ಟ್. ಪ್ರಭಾಸ್ ಗೆ ವಾಚ್ ಗಳ ಬಗ್ಗೆ ಕ್ರೇಝ್ ಜಾಸ್ತಿ. ಹಾಗಾಗಿ ಅವರಿಗೆ ಇಷ್ಟವಾಗುವಂತಹ ಸುಂದರ ಡಿಸೈನರ್ ವಾಚ್ ಒಂದನ್ನು ಅನುಷ್ಕಾ ಹುಟ್ಟುಹಬ್ಬದ ಉಡುಗೊರೆಯಾಗಿ ಕೊಟ್ಟಿದ್ದಾರೆ. ಇದನ್ನೆಲ್ಲ ನೋಡ್ತಿದ್ರೆ ಇಬ್ಬರ ಮಧ್ಯೆ ಇರೋದು ಬರೀ ಸ್ನೇಹವಲ್ಲ ಅನ್ನೋದು ಅಭಿಮಾನಿಗಳ ಅಭಿಪ್ರಾಯ.

Edited By

Shruthi G

Reported By

Shruthi G

Comments