ರೈಲುಗಳಲ್ಲಿ ಆಮ್ಲಜನಕ ಸಿಲಿಂಡರ್ ಕಡ್ಡಾಯ: ಸುಪ್ರೀಂ ಕೋರ್ಟ್ ಆದೇಶ

19 Oct 2017 4:09 PM | General
372 Report

ದೇಶದಲ್ಲಿ ಪ್ರಯಾಣಿಸುವ ಎಲ್ಲ ರೈಲುಗಳಲ್ಲಿ ಜೀವರಕ್ಷಕ ಆಮ್ಲಜನಕ ಸಿಲಿಂಡರ್ಗಳನ್ನು ಕಡ್ಡಾಯವಾಗಿ ಅಳವಡಿಸಬೇಕು. ಮಾರ್ಗಮಧ್ಯೆ ಪ್ರಯಾಣಿಕರಿಗೆ ಉಸಿರಾಟ ಸಮಸ್ಯೆ ಕಾಣಿಸಿಕೊಂಡ ಕೂಡಲೆ ಆಮ್ಲಜನಕ ಪೂರೈಸುವ ವ್ಯವಸ್ಥೆಯಾಗಬೇಕು ಎಂದು ಸುಪ್ರೀಂ ಕೋರ್ಟ್ ರೈಲ್ವೆ ಇಲಾಖೆಗೆ ಆದೇಶಿಸಿದೆ.

ಮುಖ್ಯ ನ್ಯಾಯಮೂರ್ತಿಗಳಾದ ದೀಪಕ್ ಮಿಶ್ರಾ, ಎ.ಎಂ. ಖನ್ವಿಲ್ಕಾರ್ ಹಾಗೂ ಡಿ.ವೈ. ಚಂದ್ರಚೂಡ್ ನೇತೃತ್ವದ ಪೀಠ ಈ ಆದೇಶವನ್ನು ಹೊರಡಿಸಿದೆ.

ರೈಲುಗಳಲ್ಲಿ ಆಮ್ಲಜನಕ ಸಿಲಿಂಡರ್ ಅಳವಡಿಸುವುದು ಮತ್ತು ಪ್ರಯಾಣಿಕರು ಉಸಿರಾಟ ಸಮಸ್ಯೆಯಿಂದ ಅಸ್ವಸ್ಥಗೊಂಡರೆ ಅವರಿಗೆ ಕೂಡಲೆ ಆಮ್ಲಜನಕವನ್ನು ಒಸಗಿಸುವುದರ ಬಗ್ಗೆ ಏಮ್ಸ್ನಿಂದ ನಿರ್ದೇಶಗಳನ್ನು ಪಡೆಯುವಂತೆ ರೈಲ್ವೆ ಇಲಾಖೆಗೆ ಸುಪ್ರೀಂ ಕೋರ್ಟ್ ತಿಳಿಸಿದೆ.

Courtesy: prajavani

Comments