ಗಡಿಯಲ್ಲಿ ದೀಪ ಬೆಳಗಿಸಿ ಶುಭ ಕೋರಿದ ಯೋಧರು

19 Oct 2017 11:12 AM | General
319 Report

ರಾಷ್ಟ್ರದೆಲ್ಲೆಡೆ ದೀಪಾವಳಿ ಸಡಗರ ಮನೆಮಾಡಿದ್ದು, ಗಡಿಯಲ್ಲಿ ಯೋಧರು ದೀಪ ಬೆಳಗಿಸಿ, ಸಿಹಿ ಹಂಚಿ ಸಂಭ್ರಮಿಸಿದ್ದಾರೆ. ಸರ್ವರಿಗೂ ಹಬ್ಬದ ಶುಭಾಶಯ ಕೋರಿದ್ದಾರೆ.

ನವದೆಹಲಿ: ಮನೆ ಮನ ಬೆಳಗುವ ಬೆಳಕಿನ ಹಬ್ಬ ದೀಪಾವಳಿಯ ಸಂಭ್ರಮ ಎಲ್ಲಡೆ ಇದ್ದು, ದೇಗುಲಗಳಲ್ಲಿ ಪೂಜಾ ಕಾರ್ಯ ನಡೆಯುತ್ತಿವೆ. ಇನ್ನು ಮಕ್ಕಳು ಪಟಾಕಿ ಸಿಡಿಸಿ ಸಂತಸ ಪಡುತ್ತಿರುವ ದೃಶ್ಯ.

ರಾಷ್ಟ್ರದೆಲ್ಲೆಡೆ ದೀಪಾವಳಿ ಸಡಗರ ಮನೆಮಾಡಿದ್ದು, ಗಡಿಯಲ್ಲಿ ಯೋಧರು ದೀಪ ಬೆಳಗಿಸಿ, ಸಿಹಿ ಹಂಚಿ ಸಂಭ್ರಮಿಸಿದ್ದಾರೆ.

ಜಮ್ಮು ಕಾಶ್ಮೀರದ ಪೂಂಚ್ ವಲಯದ ಗಡಿಯಲ್ಲಿ ಭಾರತೀಯ ಯೋಧರು ದೀಪ ಬೆಳಿಗಿಸಿ ಹಬ್ಬಕ್ಕೆ ಶುಭ ಕೋರಿದ್ದಾರೆ.

ಛತ್ತಿಸಗಡದ ನಕ್ಸಲ್‌ಪೀಡಿತ ಪ್ರದೇಶದಲ್ಲಿನ ಬೆದ್ರಾ ಗ್ರಾಮದಲ್ಲಿ ಭದ್ರತಾ ಸಿಬ್ಬಂದಿ ಸಿಹಿ ಹಂಚುವ ಮೂಲಕ ಸ್ಥಳಿಯರ ಜತೆ ಹಬ್ಬ ಆಚರಿಸಿದರು.

Courtesy: prajavani

Comments