ಮಲೆಮಹದೇಶ್ವರ ಬೆಟ್ಟದಲ್ಲಿ ಅದ್ದೂರಿ ದೀಪಾವಳಿ ಜಾತ್ರೆ ಮಹೋತ್ಸವ

18 Oct 2017 1:50 PM | General
429 Report

ಪ್ರಸಿದ್ಧ ಯಾತ್ರಾ ಸ್ಥಳವಾದ ಮಲೆಮಹದೇಶ್ವರ ಬೆಟ್ಟದಲ್ಲಿ ಅ. 18ರಿಂದ ಮೂರು ದಿನ ದೀಪಾವಳಿ ಜಾತ್ರೆ ವಿಜೃಂಭಣೆಯಿಂದ ನಡೆಯಲಿದೆ. ಸೋಮವಾರದಿಂದಲೇ ಬೆಟ್ಟಕ್ಕೆ ಜನರ ದಂಡು ಹರಿದುಬರುತ್ತಿದೆ. ಸುತ್ತಮುತ್ತಲ ಗ್ರಾಮಗಳ ಭಕ್ತರು ಬರಿಗಾಲಿನಲ್ಲಿ ಬೆಟ್ಟವನ್ನೇರುತ್ತಿದ್ದಾರೆ.

ಪ್ರಸಿದ್ಧ ಯಾತ್ರಾ ಸ್ಥಳವಾದ ಮಲೆಮಹದೇಶ್ವರ ಬೆಟ್ಟದಲ್ಲಿ ಅ. 18ರಿಂದ ಮೂರು ದಿನ ದೀಪಾವಳಿ ಜಾತ್ರೆ ವಿಜೃಂಭಣೆಯಿಂದ ನಡೆಯಲಿದೆ. ಸೋಮವಾರದಿಂದಲೇ ಬೆಟ್ಟಕ್ಕೆ ಜನರ ದಂಡು ಹರಿದುಬರುತ್ತಿದೆ. ಸುತ್ತಮುತ್ತಲ ಗ್ರಾಮಗಳ ಭಕ್ತರು ಬರಿಗಾಲಿನಲ್ಲಿ ಬೆಟ್ಟವನ್ನೇರುತ್ತಿದ್ದಾರೆ. ನರಕ ಚತುರ್ದಶಿ ಅಂಗವಾಗಿ ಮಹದೇಶ್ವರ ಸ್ವಾಮಿಗೆ ವಿಶೇಷ ಎಣ್ಣೆಮಜ್ಜನ, ಅಮಾವಾಸ್ಯೆ ಪೂಜೆ, ಹಾಲರವಿ ಉತ್ಸವಗಳು ನಡೆಯಲಿವೆ. ಶುಕ್ರವಾರ ರಥೋತ್ಸವ ಮತ್ತು ತೆಪ್ಪೋತ್ಸವ ಜರುಗಲಿದೆ. ಲಕ್ಷಾಂತರ ಮಂದಿ ಭಕ್ತರು ಬರುವ ನಿರೀಕ್ಷೆಯಿದ್ದು, ದೇವಸ್ಥಾನದ ಅಭಿವೃದ್ಧಿ ಪ್ರಾಧಿಕಾರ ಸಕಲ ಸಿದ್ಧತೆ ನಡೆಸಿದೆ. ಬಿಗಿ ಬಂದೋಬಸ್ತ್‌ ಮಾಡಲಾಗಿದೆ.

Edited By

Hema Latha

Reported By

Madhu shree

Comments