ಸಿಎಂ ಸಿದ್ದರಾಮಯ್ಯಗೆ HDK ಯಿಂದ ಸವಾಲು?

18 Oct 2017 1:07 PM | General
520 Report

ಬೆಂಗಳೂರು : ರಾಜಕಾಲುವೆ ಹೂಳೆತ್ತುವ ಹೆಸರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಶೇ.22ರಷ್ಟು ಅಧಿಕವಾಗಿ 850 ಕೋಟಿ ಅನುದಾನ ಬಿಡುಗಡೆ ಮಾಡಿದ್ದಾರೆ. ಇತ್ತ ಹೂಳೂ ಇಲ್ಲ. ಅತ್ತ ಹಣವೂ ಇಲ್ಲ. ಹಾಗಾದರೆ ಹಣ ಎಲ್ಲಿ ಹೋಯ್ತು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬ್ಲಾಕ್ ಲೀಸ್ಟ್‍ನಲ್ಲಿರುವ ಗುತ್ತಿಗೆದಾರರೊಗೆ ಹೂಳೆತ್ತುವ ಗುತ್ತಿಗೆ ನೀಡಲಾಗಿದೆ. ಸಿದ್ದರಾಮಯ್ಯ ಅವರು ಸತ್ಯ ಹರಿಶ್ಚಂದ್ರರಾಗಿದ್ದಾರೆ, ಬಿಡುಗಡೆ ಮಾಡಿದ ಹಣ ಎಲ್ಲಿ ಹೋಯ್ತು ಎಂಬುದನ್ನು ಒಪ್ಪಿಕೊಳ್ಳಲಿ ಎಂದು ಸವಾಲು ಹಾಕಿದರು.

ಟೆಂಡರ್ ಶೂರ್ ರಸ್ತೆಗಳಾದ ಕೆ.ಎಚ್.ರೋಡ್, ಮೋದಿ ರಸ್ತೆ, ಸಿದ್ದಯ್ಯ ಪುರಾಣಿಕ್ ರಸ್ತೆ ಸೇರಿದಂತೆ 7 ಕಿ.ಮೀ. ರಸ್ತೆ ಅಭಿವೃದ್ಧಿಗೆ 59 ಕೋಟಿ ಇದ್ದ ಅನುದಾನವನ್ನು 87 ಕೋಟಿಗೆ ಹೆಚ್ಚಿಸಲಾಗಿದೆ. ಆದರೆ, ಗುತ್ತಿಗೆದಾರರಿಗೆ ಸರಿಯಾದ ಅನುದಾನ ಬಿಡುಗಡೆ ಮಾಡಿಲ್ಲ. ಮುಖ್ಯಮಂತ್ರಿಗಳು ತಮಗೆ ಬೇಕಾದ ಹೊರ ರಾಜ್ಯದವರಿಗೆ ಟೆಂಡರ್ ನೀಡುತ್ತಿದ್ದಾರೆ. ನಮ್ಮ ರಾಜ್ಯದ ಗುತ್ತಿಗೆದಾರರಿಗೆ ಅನ್ಯಾಯ ಮಾಡಿದ್ದಾರ ಎಂದು ದೂರಿದರು.

ಬಿಬಿಎಂಪಿಯಲ್ಲಿ ನಮ್ಮ ಪಕ್ಷ ಪಾಲುದಾವಾಗಿದ್ದರೂ ಯಾವುದೇ ಸಮಸ್ಯೆಗೆ ಪರಿಹಾರ ಸಾಧ್ಯವಾಗಿಲ್ಲ. ಪಾಲಿಕೆಯ ಯಾವುದೇ ಸಮಿತಿ ಹಾಗೂ ಮೇಯರ್‍ಗೆ ಕಡತಗಳೇ ಬರುತ್ತಿಲ್ಲ. ಸರ್ಕಾರದ ಮಟ್ಟದಲ್ಲೇ ಕಡ ವಿಲೇವಾರಿ ಮಾಡಲಾಗುತ್ತಿದೆ. ನಮ್ಮ ಪಕ್ಷ ಕಾರ್ಪೊರೇಟರ್ ಗಳು ಹಾಗೂ ಸಮಿತಿ ಅಧ್ಯಕ್ಷರಿಗೆ ಯಾವುದೇ ಅಧಿಕಾರ ಇಲ್ಲದಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಬೆಂಗಳೂರಿನಲ್ಲಿ 150 ವರ್ಷಗಳ ನಂತರ ಸಾಕಷ್ಟು ಮಳೆಯಾಗಿದೆ. ಇದನ್ನು ಹವಾಮಾನ ಇಲಾಖೆ ಮೊದಲೇ ತಿಳಿಸಿತ್ತು. ಈ ಬಾರಿ ಮಳೆಗೆ 15ರಿಂದ 20 ಮಂದಿ ಸಾವನ್ನಪ್ಪಿದ್ದಾರೆ. ಆದರೆ, ಯಾವುದೇ ಮುಂಜಾಗ್ರತ ಕ್ರಮಗಳನ್ನು ಕೈಗೊಳ್ಳಲಿಲ್ಲ. ಆದರೆ ಬಿಜೆಪಿಯವರು ಆರೋಪ ಮಾಡಲು ನೈತಿಕತೆ ಉಳಿಸಿಕೊಂಡಿಲ್ಲ. ರಾಜ್ಯದ ಹಣವನ್ನು ಕಲಿಸಿದ್ದೇ ಬಿಜೆಪಿ ಎಂದು ವಾಗ್ದಾಳಿ ನಡೆಸಿದರು.

Edited By

Shruthi G

Reported By

Shruthi G

Comments