ರಾಜ್ಯದ ನಾನಾ ಕಡೆ ಇನ್ನೂ ನಾಲ್ಕು ದಿನ ಭಾರಿ ಮಳೆ ಸಾಧ್ಯತೆ

14 Oct 2017 2:54 PM | General
405 Report

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಬಹುತೇ ಕಡೆ ಎಡಬಿಡದೆ ಸುರಿಯುತ್ತಿರುವ ವರುಣ ರಾಜ್ಯ ನಾಲ್ಕು ದಿನ ಕಾಲ ರಾಜ್ಯದಲ್ಲಿ ಮಳೆರಾಯ ಸಾಧ್ಯತೆ ಇದೆ ಎನ್ನಲಾಗಿದೆ.

ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ರಾಜ್ಯ ನೈಸರ್ಗಿಕ ಮತ್ತು ಪ್ರಕೃತಿ ವಿಕೋಪ ನಿರ್ವಹಣಾ ಕೇಂದ್ರ ಉಸ್ತುವಾರಿ ನಿರ್ದೇಶಕ ಶ್ರೀನಿವಾಸ ರೆಡ್ಡಿ ಬಂಗಾಳಕೊಲ್ಲಿ ಮತ್ತು ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿದಿರುವ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ಮಂಡ್ಯ, ಮೈಸೂರು, ಕೋಲಾರ, ಕರಾವಳಿ ಭಾಗದಲ್ಲಿ ಮಳೆ ಮುಂದುವರಿಯಲಿದೆ ಎಂದು ಅವರು ಹೇಳಿದರು.

ರಾಜ್ಯದ ನಾನಾ ಭಾಗಗಳಲ್ಲಿ ಅಕ್ಟೋಬರ್​ 18ರ ತನಕ ಸಾಧ್ಯತೆ ಇದ್ದು, ಸಂಜೆಯಾಗುತ್ತಿದ್ದ ಹಾಗೇ ತನ್ನ ಪ್ರತಾಪ ತೋರಿಸುತ್ತಿದ್ದು ಈ ನಡುವೆ ಇಂದು ಸಂಜೆಯಿಂದಲೇ ಮಳೆಯಾಗುವ ಸಂಭವ ಹೆಚ್ಚಿದ್ದು, ಬೆಂಗಳೂರಿನ ನಾಗರೀಕರು ಆದಷ್ಟು ಬೇಗ ತಮ್ಮ ತಮ್ಮ ಮನೆಗಳಿಗೆ ಸೇರಿಕೊಂಡರೆ ಒಳಿತು.

Edited By

Shruthi G

Reported By

Shruthi G

Comments