ಪ್ರಜ್ವಲ್ ರೇವಣ್ಣಗೆ ದೇವೇಗೌಡರ ಕಡಕ್ ವಾರ್ನಿಂಗ್

13 Oct 2017 9:33 AM | General
506 Report

ದೇವೇಗೌಡ ಅವರು ಗುರುವಾರ ದೂರವಾಣಿ ಮೂಲಕ ಪ್ರಜ್ವಲ್ ಜೊತೆ ಮಾತನಾಡಿ, ‘ಬಕೆಟ್‌ ರಾಜಕಾರಣಿಗಳಿಂದಾಗಿ ಹುಣಸೂರಿನಲ್ಲಿ ಟಿಕೆಟ್ ಸಿಗುವುದಕ್ಕೆ ಕಲ್ಲುಬಿತ್ತು’ ಎಂಬ ಹೇಳಿಕೆ ನೀಡಿದ್ದನ್ನು ಖಂಡಿಸಿದ್ದಾರೆ’ ಎಂದು ಮೂಲಗಳು ತಿಳಿಸಿವೆ.

ಬೆಂಗಳೂರು: ಜೆಡಿಎಸ್‌ನಲ್ಲಿ ‘ಬಕೆಟ್ ಸಂಸ್ಕೃತಿ’ ಇದೆ ಎಂಬ ಪ್ರಜ್ವಲ್ ರೇವಣ್ಣ ಹೇಳಿಕೆಯಿಂದ ನೊಂದಿರುವ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ. ದೇವೇಗೌಡ, ಮೊಮ್ಮಗನಿಗೆ ದೂರವಾಣಿ ಕರೆ ಮಾಡಿ ಮತ್ತೊಮ್ಮೆ ಬುದ್ಧಿಮಾತು ಹೇಳಿದ್ದಾರೆ.

ಪಕ್ಷದ ಯುವ ಮುಖಂಡರಾದ ಪ್ರಜ್ವಲ್ ರೇವಣ್ಣ ಪಕ್ಷಕ್ಕೆ ಮುಜುಗರ ಆಗುವಂತೆ ಸಾರ್ವಜನಿಕ ವೇದಿಕೆಯಲ್ಲಿ ಪದೇ ಪದೇ ಹೇಳಿಕೆ ನೀಡುತ್ತಿರುವುದರಿಂದ ಸಾಕಷ್ಟು ಹಾನಿಯಾಗುತ್ತಿದೆ. ಅವರಿಗೆ ತಿಳಿ ಹೇಳಬೇಕು ಎಂದು ಅನೇಕ ನಾಯಕರು ದೇವೇಗೌಡರಿಗೆ ಒತ್ತಡ ಹೇರಿದ್ದಾರೆ.

ದೇವೇಗೌಡ ಅವರು ಗುರುವಾರ ದೂರವಾಣಿ ಮೂಲಕ ಪ್ರಜ್ವಲ್ ಜೊತೆ ಮಾತನಾಡಿ, ‘ಬಕೆಟ್‌ ರಾಜಕಾರಣಿಗಳಿಂದಾಗಿ ಹುಣಸೂರಿನಲ್ಲಿ ಟಿಕೆಟ್ ಸಿಗುವುದಕ್ಕೆ ಕಲ್ಲುಬಿತ್ತು’ ಎಂಬ ಹೇಳಿಕೆ ನೀಡಿದ್ದನ್ನು ಖಂಡಿಸಿದ್ದಾರೆ’ ಎಂದು ಮೂಲಗಳು ತಿಳಿಸಿವೆ.

ಪಕ್ಷದಲ್ಲಿ ಸೂಟ್‌ಕೇಸ್ ಸಂಸ್ಕೃತಿ ಇದೆ ಎಂದು ಈ ಹಿಂದೆ ಹೇಳಿಕೆ ನೀಡಿರುವುದೇ ಸಾಕಷ್ಟು ಹಾನಿಯುಂಟು ಮಾಡಿದೆ. ಅದಕ್ಕಾಗಿ ನೋಟಿಸ್ ಸಹ ನೀಡಲಾಗಿತ್ತು. ಆದರೂ ಎಚ್ಚೆತ್ತುಕೊಳ್ಳದೆ ಅದೇ ರೀತಿಯ ಹೇಳಿಕೆಗಳನ್ನು ಮುಂದುವರಿಸಿರುವುದು ಸರಿಯಲ್ಲ ಎಂಬ ಎಚ್ಚರಿಕೆಯನ್ನೂ ನೀಡಿದ್ದಾರೆ ಎನ್ನಲಾಗಿದೆ.ವಿಧಾನಸಭಾ ಚುನಾವಣೆಯಲ್ಲಿ ನಮ್ಮ ಕುಟುಂಬದಿಂದ ಎಚ್.ಡಿ. ಕುಮಾರಸ್ವಾಮಿ ಮತ್ತು ಎಚ್.ಡಿ. ರೇವಣ್ಣ ಮಾತ್ರ ಸ್ಪರ್ಧೆ ಮಾಡುತ್ತಾರೆ’ ಎಂದು ಈಗಾಗಲೇ ದೇವೇಗೌಡ ಹಾಗೂ ಕುಮಾರಸ್ವಾಮಿ ಇಬ್ಬರೂ ಸ್ಪಷ್ಟಪಡಿಸಿದ್ದಾರೆ.

 

Edited By

Shruthi G

Reported By

Shruthi G

Comments