ಕಲಾವಿದರ ಜತೆಗೂಡಿ ನೃತ್ಯ ಮಾಡಿದ ರಾಹುಲ್ ಗಾಂಧಿ

11 Oct 2017 12:12 AM | General
300 Report

ನವದೆಹಲಿ: ಮುಂಬರುವ ವಿಧಾನಸಭಾ ಚುನಾವಣೆ ಹಿನ್ನಲೆ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಗುಜುರಾತ್ ಗೆ ಆಗಮಿಸಿದ್ದ ರಾಹುಲ್ ಗಾಂಧಿ ಈ ವೇಳೆ ಕಲಾವಿದರ ಜತೆಗೂಡಿ ಟಿಮಾಲಿ ನೃತ್ಯ ಮಾಡುವ ದೃಶ್ಯ ಕಂಡು ಬಂದಿದೆ.

ANI ಸುದ್ದಿ ಸಂಸ್ಥೆ ಬಿಡುಗಡೆ ಮಾಡಿರುವ ಈ ವಿಡಿಯೋದಲ್ಲಿ ರಾಹುಲ್ ಗಾಂಧಿ ಕಲಾವಿದರ ಜತೆಗೂಡಿ ಸಾಂಪ್ರದಾಯಿಕ ನೃತ್ಯ ಮಾಡಿದ್ದಾರೆ. ಮಂಗಳವಾರ ಉದೈಪುರ ಜಿಲ್ಲೆಗೆ ತಲುಪಿದ ಅವರು ಈ ವೇಳೆ ಅವರನ್ನು ಸಾಂಪ್ರದಾಯಿಕ ಶೈಲಿಯಲ್ಲಿ ಸ್ವಾಗತಿಸಲಾಯಿತು. ಏತನ್ಮಧ್ಯೆ, ಸ್ಥಳೀಯ ಕಲಾವಿದ ತಂಡದವರು ನೃತ್ಯ ಮಾಡುತ್ತಿದ್ದರು. ಈ ವೇಳೆ ರಾಹುಲ್ ಗಾಂಧಿ ಸುಮ್ಮನೆ ಇರಲಿಲ್ಲ ಕಲಾವಿದರ ಜತೆ ತಾವು ಕೂಡ ಡ್ಯಾನ್ಸ್ ಮಾಡಿದ್ರು. ಅಲ್ಲದೇ ಸ್ಥಳೀಯ ಸಂಗೀತ ವಾದ್ಯಗಳನ್ನು ಕೈಯಲ್ಲಿ ತೆಗೆದುಕೊಂಡು ರಾಹುಲ್ ಗಾಂಧಿ ಅವುಗಳನ್ನು ನುಡಿಸಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕ, ಮಾಜಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಉಪಸ್ಥಿತರಿದ್ದರು.

Edited By

Shruthi G

Reported By

Sudha Ujja

Comments